ಅಪರಿಚಿತ ಶವ ಪತ್ತೆ

Posted on April 12, 2011

0


ಮಂಗಳೂರು: ಜಪ್ಪಿನಮೊಗರು ಗ್ರಾಮದ ನೇತ್ರಾವತಿ ಸೇತುವೆಯ ಹಿನ್ನೀರು ಜಾಗದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ಅಂದಾಜು ೪೫-೫೦ ವರ್ಷದೊಳಗಿನ ಅಪರಿಚಿತ ಗಂಡಸಿನ ಶವ ಕಳೆದ ಎರಡು-ಮೂರು ದಿನಗಳ ಹಿಂದೆ ನೀರಿಗೆ ಬಿದ್ದು ಮೃತಪಟ್ಟಿರಬೇ ಕೆಂದು ಶಂಕಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರು ಉಳ್ಳಾಲ ಪೊಲೀಸ್ ಠಾಣೆ ೦೮೨೪-೨೪೬೬೨೬೯ ಸಂಪರ್ಕಿಸುವಂತೆ ಕೋರಲಾಗಿದೆ.

ಮರದ ದಿಮ್ಮಿಗೆ ಬೆಂಕಿ: ಕಾಸರಗೋಡಿನ ಚೆಟ್ಟಂಗಡಿ ಏರ್ ಕ್ಯಾಂಪ್ ರಸ್ತೆಬಳಿಯ ಮರದ ಮಿಲ್ ಎದುರು ಇರಿಸಲಾಗಿದ್ದ ಮರದ ದಿಮ್ಮಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ನಡೆದಿದೆ. ಹಾನೆಸ್ಟಿ ಟಿಂಬರ್ ಕಂಪೆನಿಯಲ್ಲಿ ಈ ಘಟನೆ ನಡೆದಿದೆ.

Advertisements
Posted in: Crime News