ಹಿಟ್ ಆಂಡ್ ರನ್: ಎರಡು ಬಲಿ

Posted on April 11, 2011

0


ಮೂಡಬಿದ್ರೆ: ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮರ‍್ಯಾಡಿ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಶಿರ್ತಾಡಿ ಕಜೆ ನಿವಾಸಿಗಳಾದ ಸತೀಶ್ ಕ್ರಾಸ್ತಾ (೩೦) ಮತ್ತು ವಿಠಲ ಪೂಜಾರಿ (೩೦) ಮೃತ ದುರ್ದೈವಿಗಳು. ಭಾನುವಾರದ ರಜೆಯ ನಿಮಿತ್ತ ಮೂಡಬಿದ್ರೆಗೆ ಬೈಕಿನಲ್ಲಿ ತೆರಳಿದ್ದ ಇಬ್ಬರು ರಾತ್ರಿಯಾಗುತ್ತಿದ್ದಂತೆ ಶಿರ್ತಾಡಿಗೆ ಹಿಂತಿರುಗುತ್ತಿದ್ದರು. ದಾರಿಮಧ್ಯೆ ಭಾರಿ ಮಳೆಯೂ ಬರುತಿತ್ತು. ಮರ‍್ಯಾಡಿ ತಲುಪುವಷ್ಟರಲ್ಲಿ ಇವರಿದ್ದ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಮಳೆಯಿಂದಾಗಿ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದನ್ನು ಪತ್ತೆ ಮಾಡಲು ಸ್ಥಳೀಯರಿಗೆ ಕಷ್ಟವಾಯಿತು. ಆದರೆ ಡಿಕ್ಕಿಯ ರಭಸಕ್ಕೆ ಇಬ್ಬರಿಗೂ ಗಂಭೀರ ಗಾಯ ಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Posted in: Crime News