ಸಹೋದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ: ಬಂಧನ

Posted on April 11, 2011

0


ಮಂಗಳೂರು: ಕಾಞಂಗಾಡುವಿನ ವಿದ್ಯುನ್ಮಂಡಳಿಯ ಮುನ್ನಾಡ್ ಕಚೇರಿಯಲ್ಲಿ ತನ್ನ ಸಹೋದ್ಯೋಗಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆ ದೃಶ್ಯವನ್ನು ಮೊಬೈಲ್ ಕ್ಯಾಮರಾದ ಮೂಲಕ ಸೆರೆ ಹಿಡಿದು ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮುನ್ನಾಡ್ ವಿದ್ಯುನ್ಮಂಡಳಿಯ ತಾತ್ಕಾಲಿಕ ವಾಹನ ಚಾಲಕ ಕುಂಞಿತ್ತಾಣಿ ಗ್ರಾಮದ ಆಯಕಂಡ ಕಳ್ಳುಕುಟ್ಟಿಲ್ ರಾಜು(೩೯) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಯುವತಿಯು ಈತನಿಂದ ಹಲವಾರು ಸಮಯದಿಂದ ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಳು. ಇದೀಗ ಯುವತಿಯ ದೂರಿನಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Posted in: Crime News