ವೇಶ್ಯಾವಾಟಿಕೆ: ಪ್ರತಿಭಟನೆ ಹಿಂಸಾರೂಪಕ್ಕೆ

Posted on April 11, 2011

0


ಅಹಮದಾಬಾದ್: ಅಹಮದಾಬಾದಿನ ಹೊಟೇಲೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಗೆ ಎ.೫ರಂದು ದಾಳಿ ನಡೆಸಿದ್ದ ಕ್ರೈಂ ಬ್ರಾಂಚ್ ಪೊಲೀಸರು ನಾಲ್ಕು ಪುರುಷರ ಸಹಿತ ಆರು ಮಂದಿ ಯುವತಿಯರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಲಾದ ಎಸ್.ಜಿ ಹೈವೆಯಲ್ಲಿರುವ ಹೊಟೇಲನ್ನು ಶೀಘ್ರವೇ ಮುಚ್ಚಬೇಕೆಂದು ಒತ್ತಾಯಿಸಿ ಸ್ಥಳೀಯರ ಪ್ರತಿಭಟನೆ ಹಿಂಸಾರೂಪ ಪಡೆದು ಪೊಲೀಸರು ಲಾಠಿ ಹಾಗೂ ದೊಣ್ಣೆಗಳಿಂದ ಹೊಡೆದೋಡಿಸಿದರು.

ಕ್ರೈಂ ಬ್ರಾಂಚ್ ನಡೆಸಿದ ದಾಳಿಯಲ್ಲಿ ವೇಶ್ಯಾವಾಟಿಕೆಯಲ್ಲಿ ನಿರತ ರಾಗಿದ್ದ ಸುಶೀಲ್ ನೈ, ನಯನ್ ಶಾಹ್, ಹಿತೇಶ್ ಪ್ರಜಾಪತಿ, ಗೋಲ್ ಲಿಮ್ಡಾ ಮತ್ತು ಪರ್ವಿನ್ ಕುಮಾರ್ ಎಂಬವರೊಂದಿಗೆ ಉಜ್ಬೇಕಿ ಸ್ತಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೂಲದ ಆರು ಯುವತಿಯರನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರಿಂದ ಉದ್ರಿಕ್ತ ಗೊಂಡ ಜನ ಹೊಟೇಲನ್ನು ಮುಚ್ಚಿಸಬೇಕೆಂದು ಒತ್ತಾಯಿಸಿ ಹಿಂಸಾಚಾರ ನಡೆಸಿದವರನ್ನು ಪೊಲೀಸರು ಲಾಠಿಯೇಟು ನೀಡಿ ಹಲವರನ್ನು ಬಂಧಿಸಿದ್ದಾರೆ.

Posted in: National News