ಯುಪಿಸಿಎಲ್‌ನಿಂದ ಪರಿಸರ ಮಾಲಿನ್ಯ ಅರಿವಿಗೆ ಬಾರ ದ ವಿಚಾರವಲ್ಲ: ಡಾ. ಯನ್.ಟಿ

Posted on April 11, 2011

0


ಮಂಗಳೂರು: ಪಡುಬಿದ್ರಿಯ ಎಲ್ಲೂರಿನಲ್ಲಿ ಆರಂಭಗೊಂಡಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಪರಿಸರ ವಿರೋಧಿಯಾಗಿದ್ದು, ಇದು ಹೊರಸೂಸುತ್ತಿರುವ ರಾಸಾಯನಿಕ ಗಳಿಂದ ಸುತ್ತಮುತ್ತಲಿನ ವಾತಾವರಣ ಹದಗೆಟ್ಟಿದೆ ಎಂದು ಅಂಚನ್ ಆರ್ಯು ವೇದ ಸಂಸ್ಥೆಯ ಮುಖ್ಯಸ್ಥ ಡಾ. ಯನ್.ಟಿ. ಅಂಚನ್ ಹೇಳಿದ್ದಾರೆ.

ಯುಪಿಸಿಎಲ್ ಹಠಾವೋ ಆಂದೋಲನ ಪಡುಬಿದ್ರಿಯಲ್ಲಿ ಆಯೋ ಜಿಸಿದ್ದ ದ್ವಿತೀಯ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು. ಯುಪಿಸಿಎಲ್ ಪರಿಸರ ವಿರೋಧಿ ಎಂಬುದರಲ್ಲಿ ಎರಡು ಮಾತಿಲ್ಲ. ಸುತ್ತಮುತ್ತಲಿನ ಗ್ರಾಮಗಳ ಜನಜೀವನದ ವಾತಾವರಣ ಹದ ಗೆಟ್ಟಿದ್ದು ಕಂಪೆನಿಯ ಅರಿವಿಗೆ ಬಾರದ ವಿಚಾರವಲ್ಲ. ಇದೊಂದು ಯುಪಿಸಿ ಎಲ್‌ನ ಪ್ರಜ್ಞಾಪರಾಧ; ತಿಳಿದೂ ಮಾಡುತ್ತಿರುವ ತಪ್ಪು ಎಂಬುದಾಗಿ ಟಿ. ಅಂಚನ್ ಹೇಳಿದರು. ಉಡುಪಿಯ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಶೇಖರ್ ನೇತೃತ್ವದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಹಲವು ಖಾಸಗಿ ಆಸ್ಪತ್ರೆಗಳ ವೈದ್ಯರು ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿದರು. ಪಡುಬಿದ್ರಿ ಎರ್ಮಾಳು ಮತ್ತು ಹೆಜಮಾಡಿ ಪಂಚಾಯತ್‌ಗಳು ಶಿಬಿರದ ಪ್ರಾಯೋಜಕರಾಗಿದ್ದವು.