ಪಾಸ್‌ಪೊರ್ಟ್ ವಂಚನೆ : ಆರೋಪಿ ಸೆರೆ

Posted on April 11, 2011

0


ಮಂಗಳೂರು : ಪಾಸ್‌ಪೊರ್ಟ್ ಜೊತೆ ಸಿಂಗಾಪುರದಲ್ಲಿ ಉದ್ಯೋಗ ದೊರಕಿಸಿ ಕೊಡುವ ಭರವಸೆ ನೀಡಿ ವಂಚಿಸಿರುವ ಬಗ್ಗೆ ಮುಂಬೈ ನಿವಾಸಿ ಹೆನ್ರಿ ಜಾಮ್ತೀಸ್ ಎಂಬಾತನ ಮೇಲೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈ ನಿವಾಸಿ ಜಾಮ್ತೀಸ್ ಎಂಬಾತ ಕೆಲ ಸಮಯದ ಹಿಂದೆ ಸಿಂಗಾಪುರದಲ್ಲಿ ಉದ್ಯೋಗವಿದ್ದು ಕಲಿಯುತ್ತಲೇ ಉದ್ಯೋಗ ನಡೆಸಲು ಅನುಕೂಲ ಇರುವ ಬಗ್ಗೆ ಪತ್ರಿಕಾ ಜಾಹೀರಾತನ್ನು ನೀಡಿದ್ದ. ಇದನ್ನು ನೋಡಿ ಗುರುಪುರ ನಿವಾಸಿ ಸಂತೋಷ್ ರೋಣಿ ಎಂಬವರು ಜಾಮ್ತೀಸ್ ಅವರನ್ನು ಸಂಪರ್ಕಿ ಸಿದ್ದರು. ಬಳಿಕ ಸಿಂಗಾಪುರದಲ್ಲಿ ಉದ್ಯೋ ಗವಿದ್ದು ಹೋಟೇಲ್ ಮ್ಯಾನೇಜ್ ಮೆಂಟ್ ಕಲಿಯಲೂ ಇಲ್ಲಿ ಅವಕಾಶವಿರು ವುದಲ್ಲದೆ ಶೈಕ್ಷಣಿಕ ಸಾಲವನ್ನೂ ಒದಗಿಸಿ ಕೊಡಲಾ ಗುವುದು ಎಂದು ಭರವಸೆ ನೀಡಿದ್ದ.

ಇದನ್ನು ನಂಬಿದ ಸಂತೋಷ್ ಜಾಮ್ತೀಸ್‌ಗೆ ಪಾಸ್‌ಪೊರ್ಟ್ ಮಾಡಲು ಮತ್ತು ಉದ್ಯೋಗ ಒದಗಿಸಿಕೊಡಲು ೩೫ ಸಾವಿರ ರುಪಾಯಿ ನೀಡಿದ್ದ. ಇದನ್ನು ಪಡೆದುಕೊಂಡ ಬಳಿಕ ಜಾಮ್ತೀಸ್ ನಿಗೂಢ ನಾಪತ್ತೆಯಾಗಿದ್ದ ಇದರಿಂದ ಕಂಗಾಲಾದ ಸಂತೋಷ್, ಜಾಮ್ತೀಸ್ ವಿರುದ್ಧ ವಂಚನೆ ದೂರನ್ನು ಬಂದರು ಠಾಣೆಯಲ್ಲಿ ದಾಖಲಿಸಿದ್ದರು. ಇದರ ಆಧಾರದಲ್ಲಿ ನಿನ್ನೆ ಆರೋಪಿಯನ್ನು ಪೊಲೀಸರು ಬಂಧಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Posted in: Crime News