ನೆರೆಮನೆಯವರಿಗೆ ಪಂಗನಾಮ: ದೂರು

Posted on April 11, 2011

0


ಮಂಗಳೂರು: ನೆರೆಮನೆಯವರಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಅವರಿಗೆ ಸಾಲದ ಹಣ ಮರಳಿ ನೀಡದೆ ಬಾಡಿಗೆ ಮನೆ ತೊರೆದು ಪರಾರಿ ಯಾಗಿ ರುವ ಘಟನೆ ನಗರದ ಬಿಜೈ ಆನೆ ಗುಂಡಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಉರ್ವಾ ಪೊಲೀಸರಿಗೆ ದೂರಲಾಗಿದ್ದು ಪ್ರಕರಣ ದಾಖಲಾಗಿದೆ.

ಬಿಜೈ-ಆನೆಗುಂಡಿ ನಿವಾಸಿ ಗಾಡ್‌ಫ್ರಿ ಡಿಸೋಜಾ ಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಉತ್ತರ ಪ್ರದೇಶ ಮೂಲದ ಪುರುಷೋತ್ತಮ ಪಾಂಡೆ ಎಂಬಾತ ಸುಮಾರು ೧೩ ಲಕ್ಷ ರೂ. ವಂಚಿಸಿದ್ದಾಗಿ ಆರೋಪಿಸಿದ್ದಾರೆ. ಆನೆ ಗುಂಡಿಯ ಜೇಕಬ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪುರು ಷೋತ್ತಮ ಪಾಂಡೆ ಎಂಬಾತ ಕಳೆದ ಐದು ವರ್ಷಗಳಿಂದ ಸ್ಥಳೀಯರ ವಿಶ್ವಾಸ ವನ್ನು ಗಳಿಸಿಕೊಂಡಿದ್ದು, ಕಳೆದ ಐದನೇ ತಾರೀಖಿನಂದು ಆರ್ಥಿಕ ಸಮಸ್ಯೆಯ ಕಾರಣದಿಂದ ಎಂಟು ಲಕ್ಷ ರೂ. ಪಡೆ ದಿದ್ದ ಮತ್ತು ಮನೆ ಮಾಲಕ ಜೇಕಬ್ ಎಂಬಾತನಿಂದ ಐದು ಲಕ್ಷ ರೂ.ವನ್ನು ಪಡೆದು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಆರೋಪಿ ಪುರುಷೋತ್ತಮ ಪಾಂಡೆಯ ವಿರುದ್ಧ ಒಟ್ಟು ೧೩ ಲಕ್ಷ ರೂ. ವಂಚಿಸಿದ ಬಗ್ಗೆ ಪ್ರಕರಣ ದಾಖ ಲಾಗಿದ್ದು, ಈತ ಇನ್ನೂ ಹಲವಾರು ಮಂದಿಗೆ ವಂಚಿಸಿದ್ದಾನೆ ಎನ್ನಲಾಗಿದೆ. ಉರ್ವಾ ಪೊಲೀಸರು ಆರೋಪಿಯ ಶೋಧದಲ್ಲಿ ತೊಡಗಿದ್ದಾರೆ.

ಪಾಂಡೆ ಇನ್ನೂ ಕೆಲವರನ್ನೂ ತನ್ನ ಮೋಡಿಯಲ್ಲಿ ಸಿಲುಕಿಸಿ ವಂಚಿಸಿದ್ದು ಹೆಚ್ಚಿನವರು ದೂರು ಕೊಡಲು ಹಿಂಜರಿ ಯುತ್ತಿದ್ದಾರೆ. ಬಹುಭಾಷೆಗಳನ್ನು ಬಲ್ಲ ಪಾಂಡೆಗೆ ಪತ್ನಿ, ಮಕ್ಕಳಿದ್ದು ಇಲ್ಲಿಂದ ಪರಾರಿಯಾಗುವ ಮುನ್ನ ಆತ ಮೌಂಟ್ ಕಾರ್ಮೆಲ್‌ನಲ್ಲಿರುವ ಮಕ್ಕಳನ್ನು ಶಾಲೆ ಬಿಡಿಸಿದ್ದ ಎಂದು ತಿಳಿದುಬಂದಿದೆ.

Posted in: Crime News