ನಿಶ್ಚಿತಾರ್ಥವಾದ ಯುವತಿ ಪ್ರಿಯಕರನೊಂದಿಗೆ ಪರಾ ರಿ

Posted on April 11, 2011

0


ಮಂಗಳೂರು: ಕಾಞಂಗಾಡುವಿನ ಕಡಪ್ಪುರ ಎಂಬಲ್ಲಿ ಮದುವೆಗೆ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ತನ್ನ ಪ್ರಿಯತಮನ ಜೊತೆ ಪರಾರಿಯಾದ ಘಟನೆ ನಡೆದಿದೆ. ಕಡಪ್ಪುರದ ಗೋವಿಂದನ್ ಎಂಬವರ ಪುತ್ರಿ ಜೆ.ಅನಿಲಾ(೨೯) ಎಂಬಾಕೆಯೇ ಪರಾರಿಯಾದ ಯುವತಿಯಾಗಿದ್ದಾಳೆ. ಪೂಂಜಾವಿಯ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೆ ಈಕೆ ಪಳ್ಳಿಕೆರೆಯ ಪಾಕಂನ ಶೈಜು ಎಂಬಾತನ ಜೊತೆ ಪರಾರಿಯಾಗಿದ್ದು, ಇದೀಗ ಇವರಿಬ್ಬರು ದಿಲ್ಲಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿ ನಾಪತ್ತೆ: ಮಣಿಪಾಲದ ಮಾಹೆ ವಿ.ವಿ.ಯಲ್ಲಿ ವಿದ್ಯಾರ್ಥಿನಿಯಾಗಿದ್ದ ಯುವತಿಯೊಬ್ಬಳು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಶ್ರೀಜಾ ಶ್ರೀಕಂಠನ್ ಎಂಬಾಕೆಯೇ ನಾಪತ್ತೆಯಾದ ಯುವತಿಯಾಗಿದ್ದಾಳೆ. ಮಣಿಪಾಲದ ಇಂದಿರಾ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಮಂಗಳೂರಿನ ಶ್ರೀಕಂಠನ್ ನಾಯರ್ ಅವರ ಪುತ್ರಿಯಾಗಿದ್ದಾಳೆ. ಆಕೆ ತಾನು ಮದುವೆಯಾಗಿದ್ದೇನೆ ಎಂದು ಹೇಳಿ ಮನೆಗೆ ಕರೆ ಮಾಡಿ ಹೇಳಿದ್ದು ನಂತರ ಫೊನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Posted in: Crime News