ತಪ್ಪಿಸಿಕೊಂಡಿದ್ದ ಖೈದಿ ಪೊಲೀಸ್ ವಶಕ್ಕೆ

Posted on April 11, 2011

0


ಮಂಗಳೂರು: ಕಳ್ಳತನ. ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತನಾಗಿದ್ದ ಆರೋಪಿ ಕಾಲಿಯಾ ರಫೀಕ್ ಎಂಬಾತ ಕಳೆದ ಮಾರ್ಚ್ ಆರರಂದು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು ಕದ್ರಿ ಪೊಲೀಸರು ಆತನನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಚಿಕ್ಕಮಗಳೂರು ಜೈಲಿನಿಂದ ಕಾಸರಗೋಡಿನ ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೊಂಡೊಯ್ಯುತ್ತಿದ್ದ ವೇಳೆ ನಗರದ ಲಾಲ್‌ಬಾಗ್ ಬಸ್ ನಿಲ್ದಾಣದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಬಳಿಕ ಸಹಚರ ರಿಯಾಝ್ ಜತೆ ಸೇರಿ ಕಾಸರಗೋಡಿಗೆ ಪ್ರಯಾಣಿಸುತ್ತಿದ್ದ ವೇಳೆ ನಾಯ್ಕಾಪು ಬಳಿ ರಿಕ್ಷಾಕ್ಕೆ ಕಾರನ್ನು ಡಿಕ್ಕಿ ಹೊಡೆದಿದ್ದು, ಇಬ್ಬರೂ ಗಾಯಗೊಂಡಿದ್ದರು. ಮೊದಲು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದನ್ನು ಪತ್ತೆಹಚ್ಚಿದ ಕದ್ರಿ ಪೊಲೀಸರು ಅಲ್ಲಿಂದಲೇ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

Posted in: Crime News