ಏಸುವೇ… ಇವರೇನು ಮಾಡುತ್ತಿದ್ದಾರೆ?!

Posted on April 11, 2011

0


ಹತ ಭಾಗ್ಯರಿಗೆ ಕ್ರಿಶ್ಚಿಯನ್ ಧರ್ಮ ಮತ್ತು ಏಸು ಸಿದ್ದಾಂತಗಳಲ್ಲದೆ ಅವರ ಮಾತೃ ಧರ್ಮ ಭೋದನೆ ಮಾಡಲು ಸಾಧ್ಯ ವಿಲ್ಲವೇ? ಪ್ರಾರ್ಥನೆಯ ಬದಲು ಭಜ ನೆಗೆ ಅವಕಾಶ ಮಾಡಿಕೊಡಲಾಗದೆ? ಭಗ್ನ ಹೃದಯಿಗೆ ಮೇರಿಯೇ ತಾಯಿ ಯಾಗಬೇಕೆ? ಅನಾಥ ಮಗುವಿಗೆ ಕ್ರಿಸ್ತನೇ ರಕ್ಷಕನಾಗಬೇಕೇ? ಅದು ಕೂಡಾ ಈ ಸಂಧಿಕಾಲದಲ್ಲಿ?

ಸುದ್ದಿ ವಿಶ್ಲೇಷಣೆ

ಜಗತ್ತಿಗೇ ಪ್ರೀತಿ ಮತ್ತು ಶಾಂತಿಯ ಸಂದೇಶ ಬಿತ್ತರಿಸಿ, ತನ್ನ ಕಿರಿಯ ವಯಸ್ಸಿನಲ್ಲಿಯೇ ಶಿಲುಬೆಗೆ ಏರಿಸಲ್ಪಟ್ಟು ದೇಹತ್ಯಾಗ ಮಾಡಿದ ಏಸುಕ್ರಿಸ್ತ ತನ್ನ ಪುನರುತ್ಥಾನದ ಮುಂಚಿನ ಬದುಕಿನ ಕೊನೆಯ ಘಳಿಗೆಯಲ್ಲಿ ಆಡಿದ ನುಡಿಮುತ್ತೇ ‘ಓ ದೇವರೇ.. ಅವರೇನು ಮಾಡು ತ್ತಿರುವರೆಂದು ಅವರು ಅರಿಯರು. ಅವರನ್ನು ಕ್ಷಮಿಸಿ ಬಿಡು’ ಎಂದಾಗಿತ್ತು. ಆದರೆ ಇಂದು ಏಸುಕ್ರಿಸ್ತನ ಕಟ್ಟಾ ಅನುಯಾಯಿಗಳಾಗಿರುವ ಮಂದಿ ಕ್ರಿಸ್ತನ ಹೆಸರಲ್ಲಿ ನಡೆಯುತ್ತಿರುವ ಅವಾಂತರಗಳನ್ನು ಕಂಡಾಗ ಈ ನಾಡಿನ ಬಹುಸಂಖ್ಯಾತ ಮಂದಿ ಅಂದು ಏಸು ಆಡಿದ ಮಾತು ಗಳನ್ನು ಪುನರುಚ್ಚರಿಸುವಂತೆ ಮಾಡು ವಂತಿದೆ.

ಪರಲೋಕದಲ್ಲಿರುವ ತಂದೆ ನಿನ್ನನು ಕ್ಷಮಿಸಿ ಬಿಡು ವನು’ ಎಂದೋ ಮಾನವೀಯತೆಯ, ಅನುಕಂಪದ ಲೇಪ ಬಳಿದ ಕ್ರಿಶ್ಚಿಯನ್ ಧರ್ಮ ಹಿಂದೂ ತತ್ವ ಸಿದ್ದಾಂತ ಗಳಿಗೆ ಸಾಕಷ್ಟು ಪೆಟ್ಟು ಕೊಟ್ಟಿದ್ದೂ ಅಲ್ಲಗಳೆಯಲಾಗದ ಚಾರಿತ್ರಿಕ ಸತ್ಯ.

ಕ್ರಿಶ್ಚಿಯನ್ನರು ಅಥವಾ ಕಿರಿಸ್ತಾನರು ಸಾಮುದಾಯಿಕ ಅಥವಾ ವೈಯುಕ್ತಿಕ ನೆಲೆಯಲ್ಲಿ ಎಂದೆಂದಿಗೂ ಅಪಾಯ ಕಾರಿಗಳಲ್ಲ. ಒಂದು ಕಂಪೌಂಡಿನಲ್ಲಿ ಒಂದು ಕ್ರಿಶ್ಚಿಯನ್ ಕುಟುಂಬವಿದ್ದರೆ ಅಲ್ಲಿ ನಗು, ನಲಿವು, ಸಂತಸ, ಸಾಮರಸ್ಯಕ್ಕೆ ಖಂಡಿತಾ ಕೊರತೆ ಇರದು. ಆದರೆ ಈ ಮಾತು ಇಂದಿಗೆ ಪಥ್ಯವಾಗದಿರುವುದು ಯಾವ ಸಮುದಾಯದ ದುರಂತ ವೆಂದೇ ತಿಳಿಯುತ್ತಿಲ್ಲ.

ಹಿಂದೆ ನಮ್ಮ ಅವಿಭಜಿತ ಕರಾವಳಿ ಜಿಲ್ಲೆಯಾದ್ಯಂತ ಕ್ರಿಶ್ಚಿಯನ್ ಮಿಶನರಿಗಳು ಅದ್ಯಾವ ಥರ ಸಾಮೂಹಿಕ ಬದಲಾವಣೆ, ಶೈಕ್ಷಣಿಕ ಪ್ರಗತಿಗೆ ಕಾರಣ ಕರ್ತರಾ ಗಿದ್ದರೆಂ ಬುದಕ್ಕೆ ಇಂದು ಜಿಲ್ಲೆಯಾದ್ಯಂತ ಹಂಚಿ ಹೋಗಿರುವ ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳು, ಅವರು ಕಟ್ಟಿ ಬೆಳೆಸಿದ ಉದ್ಯ ಮಗಳು, ಆಸ್ಪತ್ರೆಗಳು ಇತ್ಯಾದಿ ಇತ್ಯಾದಿಗಳೇ ಸಾಕ್ಷಿ. ಅಂದು ಅವರು ಇದನ್ನೆಲ್ಲಾ ಸಮಾಜಕ್ಕೆ ನೀಡಿದ್ದು (ಅಥವಾ ನಿರ್ದಿಷ್ಠ ಸಮುದಾಯಕ್ಕೆ) ಪ್ರತಿ ಫಲಾಪೇಕ್ಷತೆ ಇಲ್ಲದೆ ಅಲ್ಲ. ಅಕ್ಷರದೊಟ್ಟಿಗೆ ವಿದ್ಯೆ ನೀಡಿ, ಮತ್ತೋರ್ವ ಅನಾರೋಗ್ಯ ಪೀಡಿತನಿಗೆ ಔಷಧೋಪಚಾರ ನೀಡಿ, ಕಡುಬಡವನಿಗೆ ತುತ್ತು ಅನ್ನನೀಡಿ, ಪ್ರೀತಿ ವಂಚಿತ ಭಗ್ನ ಹೃದಯಿಗೆ ಬದುಕು ನೀಡಿ, ಮಾನಸಿಕ ಅಸ್ವಸ್ಥನಿಗೆ ಆಸರೆ ನೀಡಿ ಕೊನೆಗೂ ಆತ ಸಂತೃಪ್ತನಾಗಿ, ಚೇತರಿ ಸಿಕೊಂಡು ಕೃತಜ್ಞತೆ ಸಲ್ಲಿಸಲು ಎದ್ದು ನಿಂತಾಗ ಇದು ನನ್ನಿಂದಲ್ಲ. ನಾನು ವಿಶ್ವಾಸವಿರಿಸುವ ಕರ್ತನಿಂದ. ನೀನು ಆತನ ಮೇಲೆ ವಿಶ್ವಾಸವಿರಿಸು’ ಎಂದು ಶಿಲುಬೆಯೆಡೆಗೆ ಕೈ ತೋರಿಸಿ ಮಾನವೀಯತೆಯಿಂದಲೇ ಮನಪರಿವರ್ತನೆಗೆ ಮುಂದಾ ಗಿದ್ದುದರ ಹಿಂದಿದ್ದುದೇ ಮತಾಂತರದ ಹುನ್ನಾರ!

ಒಬ್ಬಂಟಿ ಅನಾಥನಿಗಲ್ಲದೆ ಊರಿಗೇ ಮಹಾಮಾರಿ ಸಿಡುಬುರೋಗ ಹರಡಿದಾಗಲೂ ಇದು ಆತ ಕಳುಹಿಸಿದ ಚಿನ್ನದ ಅನ್ನದ ತುತ್ತು. ನಿಮಗಾಗಿ ನೀಡಿದ ಸಕ್ಕರೆ ಎಂದು ಆಹಾರ ವಸ್ತುಗಳನ್ನು ವಿತರಿಸಿಯೂ ಮಾಡಿದ್ದು ಧರ್ಮಾಂ ತರವನ್ನೇ. ಅದರ ಸ್ಪಷ್ಟ ಫಲಿತಾಂಶವಾಗಿಯೇ ಇಂದು ಇಲ್ಲಿರುವ ಕ್ಯಾಥೋಲಿಕ್ ಪಂಗಡ ಗಳಲ್ಲಿರುವ ಹಿಂದೂ ಉಪನಾಮಗಳು, ಪ್ರೊಟಸ್ಟಂಟ್ ಸಮುದಾಯಗಳು, ಕೆಲವು ಧಾರ್ಮಿಕ ಆಚಾರ ವಿಚಾರಗಳು! ಆದರೆ ಅದೆಲ್ಲಾ ಅಂದು ಒಂದರ್ಥದಲ್ಲಿ ಅಷ್ಟೊಂದು ಗಂಭೀರ ಸ್ವರೂಪವನ್ನು ಪಡೆದುಕೊಂಡಿರಲಿಲ್ಲ. ಕಾಲ ಹಾಗಿತ್ತು. ಆದರೆ ಇಂದು? ಕಾಲ ಸಂಪೂರ್ಣ ಬದಲಾಗಿದೆ. ನೆರೆ ಮನೆ ಯವರನ್ನು ಪಕ್ಕದ ಮನೆಯವ ನಂಬು ತ್ತಿಲ್ಲ! ಎದ್ದರೆ, ನಿಂತರೆ ಧರ್ಮಾ ಭಿಮಾನದ ಕಮಟು ವಾಸನೆ! ನಾನೇ ಬೇರೆ; ನನ್ನ ಧರ್ಮವೇ ಬೇರೆ ಎಂಬ ಭ್ರಮೆ!

ಈ ಕಾಲಘಟ್ಟದಲ್ಲಿ ಹಿಂದೆ ತನ್ನ ಹಿರಿಯರು ಮಾಡಿದ್ದ ‘ಘನಂದಾರಿ ಸಮಾಜ ಸೇವೆ’ಗಳನ್ನು ಇಂದು ಮುರಿ ಯುತ್ತಿರುವುದು ಎಷ್ಟು ಸರಿ? ಮತ್ತು ಈ ಘನಂದಾರಿ ಕೆಲಸಗಳು ಅದೆಷ್ಟು ಸ್ವಾರ್ಥರಹಿತವಾಗಿದೆ ಎಂಬ ಪ್ರಶ್ನೆಗಳು ಆಗಾಗ್ಗೆ ಮೂಡುತ್ತಿರುವುದರಲ್ಲಿ ಅತಿ ಶಯವೂ ಇಲ್ಲವಲ್ಲವೇ? ಅದನ್ನು ಒಪ್ಪಿ ಕೊಳ್ಳೋಣ. ಮತಿಗೆಟ್ಟವನಿಗೆ ಕಂಕ ನಾಡಿಯೆಂದೋ, ಮದುವೆಯಾಗದೆ ಪಿಂಡ ಹೊತ್ತವಳಿಗೆ ‘ಜೆಪ್ಪು’ ಎಂದೋ, ದಿಕ್ಕಿಲ್ಲದ ತಬ್ಬಲಿಗೆ ‘ಬೆಂದೂರ್’ ಎಂದೋ ಇಟ್ಟು ಕೊಳ್ಳೋಣ. ಆದರೆ ಇಂತಹ ಕಡೆಗಳಲ್ಲಿ ದಾಖಲಾಗುವ ಹತ ಭಾಗ್ಯರಿಗೆ ಕ್ರಿಶ್ಚಿಯನ್ ಧರ್ಮ ಮತ್ತು ಏಸು ಸಿದ್ದಾಂತಗಳಲ್ಲದೆ ಅವರ ಮಾತೃ ಧರ್ಮ ಭೋದನೆ ಮಾಡಲು ಸಾಧ್ಯ ವಿಲ್ಲವೇ? ಪ್ರಾರ್ಥನೆಯ ಬದಲು ಭಜ ನೆಗೆ ಅವಕಾಶ ಮಾಡಿಕೊಡಲಾಗದೆ? ಭಗ್ನ ಹೃದಯಿಗೆ ಮೇರಿಯೇ ತಾಯಿ ಯಾಗಬೇಕೆ? ಅನಾಥ ಮಗುವಿಗೆ ಕ್ರಿಸ್ತನೇ ರಕ್ಷಕನಾಗಬೇಕೇ? ಅದು ಕೂಡಾ ಈ ಸಂಧಿಕಾಲದಲ್ಲಿ?

ಅಂದಹಾಗೆ ಈ ಬೆಳವಣಿಗೆಗೆ ಆ ಸಮುದಾಯ, ಆ ಮಹಾಮಹಿಮ ಏಸುವೇ ಪೂರ್ಣ ಕಾರಣ ಎನ್ನಲಾಗು ವುದಿಲ್ಲ. ಮತಿಗೆಟ್ಟವನನ್ನು ನೇರಾನೇರಾ ಎತ್ತಿ ಕಂಕನಾಡಿಗೆ ಸಾಗಿಸುವ ಆತನ ಸಮುದಾಯದವರು, ಗರ್ಭ ತೆಗೆಸಿ ದಾಕೆಯ ಮನೆಮಂದಿ, ಹೆತ್ತ ಮಗು ವನ್ನು ಪೊದೆಗೆ ಬಿಸಾಕುವ ಮಹಾ ತಾಯಿ, ಏಡ್ಸ್ ಪೀಡಿತ ಅಣ್ಣನನ್ನು ತುಚ್ಛೀಕರಿಸುವ ತಂಗಿ, ಹೆಚ್ಚೇಕೆ, ತಮ್ಮ ಮಕ್ಕಳನ್ನು ಆಂಗ್ಲಭಾಷಾ ಮೋಹದಿಂದ ಕಾನ್ವೆಂಟ್‌ಗಳಿಗೆ ಕಳುಹಿಸುವ ಕಟ್ಟರ್ ಹಿಂದೂವಾದಿಗಳು ಹೀಗೆ…. ಇವರೆಲ್ಲಾ ಕಾರಣರು!

ಐದಾರು ಮೆಡಿಕಲ್ ಕಾಲೇಜು ಗಳು, ವಿಖ್ಯಾತ ಆಸ್ಪತ್ರೆಗಳು ಜಿಲ್ಲೆಯ ಲ್ಲಿದ್ದರೂ ಕಂಕನಾಡಿ ಹೊರತು ಪಡಿಸಿ ಎಲ್ಲಿಯೂ ಮಾನಸಿಕ ಚಿಕಿತ್ಸೆ ಮಾರ್ಡು ಗಳಿಲ್ಲ! ಅಬಾರ್ಶನ್‌ಗೆ ಸಾವಿರಾರು ರೂಪಾಯಿ ದೋಚುವ ಆಸ್ಪತ್ರೆಗಳಲ್ಲಿ ಅನಾಥ ಮಕ್ಕಳ ಆರೈಕೆಗೆ ವಿಭಾಗಗಳಿಲ್ಲ. ಕುಡಿದು ಕುಡಿದು ಕರುಳು ತೂತಾ ದವನಿಗೆ ಆಸರೆಯಾಗಲು ಮತ್ತೊಂದು ‘ವೆಲ್ಲಂಕಣಿ’ ವಾರ್ಡಿಲ್ಲ! ಒಂದು ಪ್ರೀತಿಯ ಅಪ್ಪುಗೆ ನೀಡುವ ಆಪ್ತ ಸಮಾಲೋಚನಾ ವ್ಯವಸ್ಥೆಯಿಲ್ಲ… ಈ ಎಲ್ಲಾ ‘ಇಲ್ಲಗಳು’ ಸಂಘಟನೆ, ಸನಾತನ, ಹಿಂದೂ ಬಾಂಧವರು ಒಂದು ಎಂದು ಸಾರುವ ಹಿಂದೂ ಧರ್ಮದ ಮುಖಂ ಡರ, ಸಾಧು ಸಂತರ, ಹಣ ವಂತರ, ಧರ್ಮ ಸುಧಾರಕರ ಮೂಗಿನ ನೇರದ ಲ್ಲಿಯೇ ಇವೆ ಎನ್ನುವುದು ಮತ್ತೊಂದು ಕಾರಣ. ಇದು ಬದ ಲಾಗುವವರೆಗೆ ಪರ ಲೋಕದಲ್ಲಿರುವ ತಂದೆಯೇ ಎಲ್ಲರನ್ನೂ ಕಾಯಬೇಕು… ಅಲ್ಲವೇ?