ಇಬ್ಬರು ಹೆಂಡಿರ ಮುದ್ದಿನ ಗಂಡ: ನಾಪತ್ತೆಯಾಗಿದ್ ದ ಜೋಡಿ ಪತ್ತೆ

Posted on April 11, 2011

0


ಪುತ್ತೂರು: ಕಳೆದ ಸೋಮವಾರ ಕಾಣೆಯಾಗಿದ್ದ ಪುತ್ತೂರು ಬೊಳು ವಾರಿನ ಯುವತಿ ಹಾಗೂ ಆಕೆಯ ಪ್ರಿಯಕರ ಎನ್ನಲಾದ ಅತ್ತೆಮಗ ನಿನ್ನೆ ಪುತ್ತೂರು ಠಾಣೆಗೆ ಹಾಜರಾಗಿದ್ದಾರೆ.

ಪುತ್ತೂರು ಬೊಳುವಾರಿನ ನಿಸಾನ್‌ಗುಡ್ಡೆ ನಿವಾಸಿ ಅಬೂಬಕ್ಕರ್ ರವರ ಪುತ್ರಿ ರೆಹನಾ ಹಾಗೂ ಅಬೂ ಬಕ್ಕರ್ ಅಕ್ಕನ ಮಗ ವಿವಾಹಿತ ಕಟ್ಲಿಸ್ ಬಶೀರ್ ಹಾಗೂ ರೆಹನಾ ಪೊಲೀಸರ ಮುಂದೆ ಹಾಜರಾಗಿ ಮದುವೆ ಯಾಗು ತ್ತೇವೆಂದು ಪಟ್ಟು ಹಿಡಿದಿದ್ದು, ಅದರಂತೆ ಮನೆಮಂದಿ ಒಪ್ಪಿಗೆ ಸೂಚಿಸಿದ್ದಾರೆ. ಈತನ ಹಿಂದಿನ ಹೆಂಡತಿ ಈಶ್ವರ ಮಂಗಲದ ರುಬಿಯಾ ಕೂಡಾ ಹಾಜ ರಿದ್ದು, ಪೊಲೀಸರು ಠಾಣೆಯಲ್ಲಿ ಮಾತು ಕತೆ ನಡೆಸಿ ವಿಚಾರಿಸಿದಾಗ ರುಖಿಯಾ ರೆಹನಾಳನ್ನು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದು, ಅದರಂತೆ ಇಬ್ಬರು ಹೆಂಡತಿಯನ್ನು ಕಟ್ಲಿಸ್ ಬಶೀರ್ ತನ್ನ ತೆಕ್ಕೆಗೆ ಹಾಕಿ ಕೊಂಡಿದ್ದಾನೆ.

Posted in: Crime News