ಸವಾರರ ಮೇಲೆ ಉರುಳಿದ ಮರ: ಓರ್ವ ಮೃತ್ಯು

Posted on April 11, 2011

0


ಕಾರ್ಕಳ: ನಿನ್ನೆ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಬೈಕ್ ಸವಾ ರರ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಹೆಬ್ರಿಯ ನಾಡ್ಪಾಲು ಎಂಬಲ್ಲಿ ನಡೆದಿದೆ.

ಹೆಬ್ರಿಯ ಉತ್ತುರ್ಕೆ ನಿವಾಸಿ ನಾಗ ರಾಜ್ ಕುಲಾಲ್ (೩೨) ಎಂಬವರೇ ಮೃತಪಟ್ಟವ ರಾಗಿದ್ದು, ಸಹ ಸವಾರ ಸೋಮೇಶ್ವರದ ಬಸವ ನಾಯ್ಕ್ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಬ್ರಿಯಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದಾಗ ನಾಡ್ಪಲು ಎಂಬಲ್ಲಿ ಮರ ವೊಂದು ಬೈಕ್ ಸವಾರರ ಮೇಲೆ ಉರುಳಿ ಬಿದ್ದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟರೆ ಸಹ ಸವಾರ ಗಣಪತಿ ನಾಯ್ಕ್ ಗಾಯ ಗೊಂಡಿದ್ದು ಮಣಿ ಪಾಲ ಆಸ್ಪತ್ರೆಗೆ ದಾಖಲಿ ಸಲಾಗಿದೆ. ತಾಲೂಕಿನ ಅಲ್ಲಲ್ಲಿ ಸಿಡಿಲು ಮಿಂಚಿ ನಿಂದ ಕೂಡಿದ ಮಳೆಯಾಗಿದೆ.

Advertisements
Posted in: Crime News