ವೆಟ್ಟೆಲ್‌ಗೆ ಒಲಿದ ಮಲೇಶಿಯನ್ ಗ್ರಾಂಡ್‌ಫ್ರೀ

Posted on April 11, 2011

0


ಸೆಪಾಂಗ್: ಇಲ್ಲಿ ನಿನ್ನೆ ನಡೆದ ಪ್ರತಿಷ್ಟಿತ ಮಲೇಶಿಯನ್ ಗ್ರಾಂಡ್ ಫ್ರೀಯನ್ನು ರೆಡ್‌ಬುಲ್‌ನ ಚಾಲಕ ಜರ್ಮನಿಯ ಸೆಬಾಸ್ಟಿಯನ್ ವೆಟ್ಟೆಲ್ ಗೆದ್ದುಕೊಂಡಿದ್ದು ನಂತರದೆರಡು ಸ್ಥಾನವನ್ನು ಕ್ರಮವಾಗಿ ಮೆಕ್‌ಲ್ಯಾರೆನ್‌ನ ಜೆನ್ಸನ್ ಬಟ್ಟನ್ ಹಾಗೂ ರೆನಾಲ್ಟ್‌ನ ನಿಕ್ ಹಿಡ್‌ಫಿಲ್ಡ್ ಜಯಿಸಲು ಸಫಲ ರಾಗಿದ್ದರೆ ಭಾರತದ ನಾರಾಯಣ್ ಕಾರ್ತಿಕೇಯನ್ ೨೩ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ವಿಜಯ್ ಮಲ್ಯ ಒಡೆತನದ ಫೋರ್ಸ್ ಇಂಡಿಯಾ ಕ್ರಮವಾಗಿ ೧೦ ಹಾಗೂ ೧೧ನೇ ಸ್ಥಾನವನ್ನು ಪಡೆಯಲು ಶಕ್ತವಾಗಿದೆ. ಆದರೆ ಪ್ರಸಿದ್ದ ಚಾಲಕರಾದ ಎರಡನೇ ಲೇನ್‌ನಿಂದ ಆರಂಭಿಸಿದ್ದ ಲೂಯಿಸ್ ಹ್ಯಾಮಿಲ್ಟನ್, ಮೈಕಲ್ ಶುಮಾಂಕರ್ ಹಾಗೂ ಫರ್ನಾಂಡೋ ಅಲಾನ್ಸೋ ನಿರಾಸೆ ಅನುಭಿಸಿದರು.
[cateory spo]

Advertisements
Posted in: Special Report