ಲೋಕಪಾಲ ಸಮಿತಿಗೆ ರಾಮ್ ದೇವ್ ಆಕ್ಷೇಪ ಬಳಿಕ ಸ್ಪ ಷ್ಟನೆ

Posted on April 11, 2011

0


ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಜಾರಿಯಾಗಲಿಕಿರುವ ಜನಲೋಕಪಾಲ ಮಸೂದೆಗೆ ರಚನೆಗೊಂಡ ಸಮಿತಿಯಲ್ಲಿ ಅಪ್ಪ-ಮಗನನ್ನು ಸೇರಿಸಿ ಸ್ವಜನಪಕ್ಷಪಾತ ಅನುಸರಿಸಲಾಗಿದೆ ಎಂದು ಆರೋಪಿ ಸಿದ್ದ ಯೋಗಗುರು ಬಾಬಾರಾಮ್ ದೇವ್ ಇದೀಗ ತಾನು ಅಂತಹ ಹೇಳಿಕೆಯನ್ನೇ ನೀಡಲಿಲ್ಲ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಸಮಿತಿಯಲ್ಲಿ ತಂದೆ ಮಗನಾಗಿರುವ ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ನೇಮಿಸಿರುವ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದು ತಾನು ಹೇಳಿರುವ ಮಾತಲ್ಲ ಬದಲಾಗಿ ಮಾಧ್ಯಮಗಳು ಸೃಷ್ಟಿಸಿದ್ದು ಎಂದು ತನ್ನ ತಪ್ಪನ್ನು ಮರೆಮಾಚಿಸಿದ್ದಾರೆ. ಬಾಬಾ ರಾಮ್‌ದೇವ್ ನೀಡಲಾಗಿದೆ ಎಂದು ಹೇಳಲಾಗಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ ಸಮಿತಿ ಯಾರ ಸ್ವಾರ್ಥಕ್ಕಾಗಿ ನಿರ್ಮಿಸಲಾಗಿಲ್ಲ, ಬದಲಾಗಿ ಜನರ ಹಿತಕ್ಕಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ವಿರೋಧ ಹೇಳಿಕೆ ನೀಡುವುದರಿಂದ ನಾವೇ ನಷ್ಟವನ್ನು ಅನುಭವಿಸಲಿದ್ದೇವೆಂದು ತಿಳಿಸಿದ್ದಾರೆ. ಈ ಮಾತುಗಳನ್ನು ಆಲಿಸಿದ ರಾಮ್‌ದೇವ್ ತಾನು ಅಂತಹ ಹೇಳಿಕೆ ಯನ್ನೇ ನೀಡಲಿಲ್ಲ ಬದಲಾಗಿ ಕಿರಣ್ ಬೇಡಿಯವರನ್ನು ಸಮಿತಿಯಲ್ಲಿ ನೇಮಿ ಸಿದರೆ ಒಳಿತು ಎಂಬ ಸಲಹೆ ಯನ್ನು ನೀಡಿದ್ದೇನೆ ಹೊರತು ಬೇರೆ ಏನೂ ಹೇಳಿಲ್ಲ ಎಂದು ತಿಳಿಸಿದ್ದಾರೆ. ಲೋಕಪಾಲ ಮಸೂದೆ ಜಾರಿಗೊಳ್ಳುವ ಮುನ್ನವೇ ಸಮಿತಿಯಲ್ಲಿರುವವರೊಂದಿಗೆ ಆಗದವರು ರಾಜಕೀಯ ನಡೆಸುತ್ತಿರುವುದು ಇದರಿಂದ ದೃಢವಾಗಿದೆ.

Advertisements
Posted in: National News