ರಾಜ್ಯದಲ್ಲಿ ‘ಐಡಿಯಾ ಇನ್ನಿಲ್ಲ?

Posted on April 11, 2011

0


ಮಂಗಳೂರು: ರಾಜ್ಯದಲ್ಲಿ ಐಡಿಯಾ ಮೊಬೈಲ್ ಸೇವೆ ಬಳಸುತ್ತಿರುವ ಗ್ರಾಹಕರು ಇನ್ನು ಮುಂದೆ ಬೇರೆ ಮೊಬೈಲ್ ಸೇವೆಯನ್ನು ಬಳಸಬೇಕಾಗಿ ಬರಬಹುದು. ಇದಕ್ಕೆ ಕಾರಣ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಡಿಯಾ ಕಂಪೆನಿಯ ಪರವಾನಿಗೆ ಹಿಂದಕ್ಕೆ ಪಡೆಯುವಂತೆ ಕೇಂದ್ರ ದೂರ ಸಂಪರ್ಕ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ.

ನಿಗದಿತ ಸಮಯದಲ್ಲಿ ಸೇವೆ ಆರಂಭ ಮಾಡದೇ ಇರುವುದಕ್ಕಾಗಿ ಕರ್ನಾಟಕ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಐಡಿಯಾ ಸೇವೆಗೆ ನೀಡಿರುವ ಪರವಾನಿಗೆ ರದ್ದು ಮಾಡುವಂತೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರಕಾರ ಶಿಫಾರಸು ಒಪ್ಪಿಕೊಂಡರೆ ಕಂಪೆನಿಗಳ ಲೈಸೆನ್ಸ್ ರದ್ದಾಗಲಿದೆ.

Advertisements