ರಾಜಕಾರಣಿಗಳಿಗೆ ಬಜರಂಗ ಎಚ್ಚರಿಕೆ

Posted on April 11, 2011

0


ಮಂಗಳೂರು: ಮತಾಂತರಕ್ಕೆ ಬೆಂಬಲ ನೀಡುತ್ತಾ ಹಿಂದೂ ಸಂಘಟನೆ ಗಳನ್ನು ಕೀಳಾಗಿ ಕಾಣುವ ರಾಜಕಾರಣಿ ಗಳಿಗೆ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಎಚ್ಚರಿಕೆ ನೀಡಿದೆ.

ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಮಕ್ಕಳ ಕಲ್ಯಾಣದ ಹೆಸರಿನಲ್ಲಿ ಅನಾಥಾ ಶ್ರಮ ನಡೆಸುತ್ತಾ, ಇಲ್ಲಿನ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡು ತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ಇಲಾಖೆಗೆ ಹಸ್ತಾಂತರಿಸಿದ, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಬಗ್ಗೆ ಕುತ್ಸಿತ ಮನೋಭಾವದ ಕೆಲ ರಾಜ ಕಾರಣಿಗಳು ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಕೆಳಮಟ್ಟದ ಮನೋಭಾವದ ಪ್ರತೀಕವಾಗಿದೆ. ಹಿಂದೂ ಸಮಾಜದ ರಕ್ಷಣೆಗೆ ಕಟಿ ಬದ್ದ ರಾಗಿರುವ ಹಿಂದೂ ಸಂಘಟನೆ ಸಂಕು ಚಿತ ಮನೋಭಾವದ ರಾಜಕಾರಣಿಗಳ ಬಗ್ಗೆ ಎಚ್ಚರ ವಹಿಸುತ್ತದೆ ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Advertisements