ನಿವೇಶನರಹಿತರ ಸಮಾವೇಶ

Posted on April 11, 2011

0


ಮಂಗಳೂರು: ನಿವೇಶನದ ಬೇಡಿಕೆ ಈಡೇರಬೇಕಾದರೆ ನಿವೇಶನ ರಹಿತರು ಏಕಾಂಗಿಯಾಗಿ ಹೋರಾಟ ನಡೆಸದೆ ಎಲ್ಲಾ ವರ್ಗದವರನ್ನು ಜೊತೆ ಸೇರಿಸಿ ತೀವ್ರ ರೀತಿಯ ಚಳವಳಿ ನಡೆಸಿದಾಗ ಮಾತ್ರ ಬೇಡಿಕೆ ಈಡೇರಲು ಸಾಧ್ಯ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ ಕೊಂಚಾಡಿ ಹೇಳಿದ್ದಾರೆ.

ಅವರು ಕೊಂಚಾಡಿ ರಾಮಾ ಶ್ರಮ ಶಾಲೆಯ ಬಳಿ ಡಿವೈಎಫ್‌ಐ ಕೊಂಚಾಡಿ ಘಟಕ ಹಮ್ಮಿಕೊಂಡಿದ್ದ ನಿವೇಶನ ರಹಿತರ ವಾರ್ಡ್ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದರು. ಸಮಾವೇಶದಲ್ಲಿ ವಾರ್ಡ್ ಮಟ್ಟದ ನಿವೇಶನ ರಹಿತರ ಹೋರಾಟ ಸಮಿತಿಯನ್ನು ರಚಿಸಲಾ ಯಿತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ನಗರಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕೊಂಚಾಡಿ ಘಟಕದ ಮುಖಂಡರಾದ ನವೀನ್ ಕೊಂಚಾಡಿ, ರವಿಚಂದ್ರ ಕೊಂಚಾಡಿ, ದಯಾನಂದ ಶೆಟ್ಟಿಗಾರ್, ಕ್ರಿಸ್ಟೋಫರ್ ಉಪಸ್ಥಿತರಿದ್ದರು.

Advertisements