ಡೆಲ್ಲಿಗೆ ಮಾರಕವಾದ ಮಲಿಂಗಾ

Posted on April 11, 2011

0


ದೆಹಲಿ: ಮಲಿಂಗಾ ನಡೆಸಿದ ಕರಾರುವಕ್ಕಾದ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಎಂಟು ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಡೆಲ್ಲಿ ವೇಗಿ ಲಸಿತ್ ಮಲಿಂಗಾ ನಡೆಸಿದ ಮಾರಕ ದಾಳಿಗೆ ೧೭.೪ ಓವರ್‌ನಲ್ಲೇ ಕೇವಲ ೯೫ ರನ್‌ಗೆ ಸರ್ವಪತನ ಕಂಡಿತು. ನಮನ್ (೨೯) ಹಾಗೂ ವೇಣುಗೋಪಾಲ್ ರಾವ್ (೨೬) ತಂಡದ ಪರ ಗರಿಷ್ಟ ರನ್ ದಾಖಲಿಸಿ ದರು. ಮಲಿಂಗಾ ೫ ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ್ದ ಮುಂಬೈ ಯಾವ ಹಂತದಲ್ಲೂ ಎಡವದೆ ೧೬.೫ ಓವರ್ ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ೯೯ ರನ್ ಪೇರಿಸಿ ಗೆಲುವಿನ ನಗೆ ಬೀರಿತು. ತಂಡದ ಮೊತ್ತ ಒಂದು ಆಗಿದ್ದಾಗಲೇ ಜಾಕೊಬ್ಸ್ ವಿಕೆಟ್ ಕಳೆದು ಕೊಂಡು ಮುಂಬೈ ಆಘಾತ ಅನುಭವಿ ಸಿತು. ರಾಯುಡು ಆರಂಭಿಕ ಸಚಿನ್ ಜೊತೆ ಸೇರಿ ೩೦ ರನ್‌ಗಳನ್ನು ಒಟ್ಟು ಗೂಡಿಸಿ ದರು. ಆದರೆ ೧೪ ರನ್ ಗಳಿಸಿ ಆಡುತ್ತಿದ್ದ ರಾಯುಡು ತನ್ನ ವಿಕೆಟ್ ಕಳೆದು ಕೊಂಡಾಗ ತಂಡ ಮತ್ತೇ ಆಘಾತ ಕಂಡಿತು. ಆದರೆ ಇನ್ನೊಂದು ಬದಿ ಯಲ್ಲಿ ಸಚಿನ್ ತಂಡಕ್ಕೆ ಆಧಾತ ಸ್ತಂಭ ವಾಗಿ ನಿಂತರು. ಅಂತಿಮವಾಗಿ ಸಚಿನ್ (೪೬) ಹಾಗೂ ರೋಹಿತ್ (೨೭) ಮೂರನೇ ವಿಕೆಟ್‌ಗೆ ಅಜೇಯ ೬೮ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದರು. ಈ ಮೊದಲು ದೆಹಲಿ ದುರ್ಬಲ ಬ್ಯಾಟಿಂಗ್ ನಡೆಸಿತು. ಸ್ಫೋಟಕ ವಾರ್ನರ್‌ಗೆ ಪೆವಿಲಿಯನ್ ದಾರಿ ತೋರಿಸುವ ಮೂಲಕ ತನ್ನ ವಿಕೆಟ್ ಖಾತೆಯನ್ನು ಆರಂಭಿಸಿದ ಮಲಿಂಗಾ ಬಳಿಕ ದೆಹಲಿ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು. ಎರಡು ಬೌಂಡರಿ ಹಾಗೂ ಒಂದು ಸಿಕ್ಸ್ ನೆರವಿನಿಂದ ೧೯ ರನ್ ಗಳಿಸಿದ್ದ ಸೆಹ್‌ವಾಗ್ ರನೌಟ್ ಬಲೆಗೆ ಬಿದ್ದರು. ಕೇವಲ ಮೂರು ಬ್ಯಾಟ್ಸ್ ಮೆನ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಎರಡಂಕಿ ದಾಖಲಿಸಿಲು ವಿಫಲರಾದರು. ೫ ದಾಂಡಿಗರು ಶೂನ್ಯಕ್ಕೆ ಮರಳಿದ್ದು ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿತ್ತು.

Advertisements
Posted in: Sports News