ಡಾಮರು ಮೆತ್ತಿಕೊಳ್ಳುತ್ತಿರುವ ಕಾರ್ಪೊರೇಟರ್‌ ಗಳು

Posted on April 11, 2011

0


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ಬೆಳೆದಿದೆ ಎಂದರೆ ಭ್ರಷ್ಟಾಚಾರಕ್ಕೆ ಪರ್ಯಾಯ ಪದವೇ ಮನಪಾ ಎಂಬಂತಾಗಿದೆ ಹೀಗೆಂದು ಇಲ್ಲಿಗೆ ನಿತ್ಯ ಅಲೆಯುವ ಜನರು ಹೇಳುತ್ತಿದ್ದಾರೆ. ವೈಯಕ್ತಿಕ ಕೆಲಸ ಗಳಂತೂ ಸುಲಭದಲ್ಲಿ ಆಗುವುದಿಲ್ಲ. ಸಾರ್ವಜನಿಕ ಕೆಲಸವಾದರೂ ಮಾಡು ತ್ತಾರೆಯೇ ಎಂದರೆ ಅದೂ ಇಲ್ಲ. ಸಾರ್ವಜನಿಕ ಕೆಲಸಗಳಲ್ಲಿ ಜನ ಪ್ರತಿ ನಿಧಿಗಳೂ, ಅಧಿಕಾರಿಗಳೂ ಸಮ ಪಾಲುದಾರರಾಗಿ ಕೈ ಚಾಚುತ್ತಿ ರುವು ದರಿಂದ ಗುತ್ತಿಗೆದಾರರು ಸಣ್ಣ ಪುಟ್ಟ ಕೆಲಸಗಳ ನಿರ್ವಹಣೆಗೆ ಮುಂದಾ ಗುತ್ತಿಲ್ಲ.

ಮುಂದಿನ ಒಂದು ತಿಂಗಳಲ್ಲಿ ಮಂಗಳೂರು ಮನಪಾ ವ್ಯಾಪ್ತಿಯ ರಸ್ತೆ ಗಳಿಗೆ ಡಾಮರು ಹಾಕುವ ಕಾಮ ಗಾರಿ ಮುಗಿಯಬೇಕು. ಹೆಚ್ಚಿನ ವಾರ್ಡ್ ಗಳಲ್ಲಿ ಕಾಮಗಾರಿ ಆರಂಭ ವಾಗುವ ಲಕ್ಷಣ ಗಳೇ ಕಾಣಿಸುತ್ತಿಲ್ಲ. ಡಾಮರು ಹಾಕುವ ಕಾಮಗಾರಿ ಆರಂಭ ವಾಗದೇ ಇದ್ದರೆ ಅದಕ್ಕೆ ಕಾರ್ಪೊ ರೇಟರ್‌ಗಳ ಕಮೀ ಷನ್ ಆಸೆಯೇ ಕಾರಣ ಎಂದು ನಾಗ ರಿಕ ಹೋರಾಟ ಸಮಿತಿಯ ಅಧ್ಯಕ್ಷ ಹನುಮಂತ್ ಕಾಮತ್ ಆರೋಪಿ ಸುತ್ತಾರೆ.

ಡಾಮಾರು ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಭಾರೀ ಪ್ರಮಾಣದ ಲಾಭವೇನೂ ದಕ್ಕುವುದಿಲ್ಲ, ಆದರೆ ಕಾರ್ಪೊರೇಟರ್‌ಗಳನೇಕರು ಇದರಲ್ಲೂ ತಮಗೆ ಶೇ.೨೦ರಷ್ಟು ಕಮೀಷನ್ ಕೊಡಬೇಕು ಎಂದು ಒತ್ತಡ ಹೇರುತ್ತಿ ರುವುದರಿಂದ ರಸ್ತೆಗೆ ಡಾಮರು ಹಾಕುವ ಕಾಮಗಾರಿಗೆ ಗುತ್ತಿಗೆದಾರರು ಮುಂದಾ ಗುತ್ತಿಲ್ಲ. ಕಾಮಗಾರಿಗೆ ಬೇಕಾದ ಸಿದ್ಧತೆ ಗಳೆಲ್ಲವೂ ಪೂರ್ಣ ಗೊಂಡಿದ್ದರೂ. ಜನರಿಗೆ ಸುವ್ಯವಸ್ಥಿತ ರಸ್ತೆಯ ಭಾಗ್ಯ ಇಲ್ಲದಂತಾಗಿದೆ. ಇದರ ಕಷ್ಟ ನಷ್ಟಗಳನ್ನು ನಗರ ವಾಸಿಗಳು ಮಳೆಗಾಲದಲ್ಲಿ ಅನುಭ ವಿಸಬೇಕಾಗುತ್ತದೆ.

ಕೆಲವು ಕಡೆಗಳಲ್ಲಿ ಕಾರ್ಪೊರೇಟರ್ ಗಳ ಒತ್ತಾಯಕ್ಕೆ ಡಾಮರು ಹಾಕಲಾ ಗಿದ್ದರೆ ಅಂತಹ ಗುತ್ತಿಗೆದಾರರಿಗೆ ಬಿಲ್ ಪಾಸ್ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೆಲವು ಕಾರ್ಪೊರೇಟರ್‌ಗಳು ಮಂಜೂರಾಗದ ಕೆಲಸಗಳನ್ನೂ ಕೂಡ ಗುತ್ತಿಗೆದಾರರಿಂದ ಮಾಡಿಸಿದ್ದಾರೆ. ಈಗ ಗುತ್ತಿಗೆದಾರರು ಇವರ ಹಿಂದೆ ಬಿಲ್ ಗಾಗಿ ಅಲೆಯುವಂತಾಗಿದೆ. ಇವರ ಸ್ಥಿತಿ ನೋಡಿ ಇತರ ಗುತ್ತಿಗೆದಾರರ ಜಾಗ್ರತ ರಾಗಿದ್ದಾರೆ. ಬಡ್ಡಿಯ ಹಣದಲ್ಲಿ ಕಾಮ ಗಾರಿ ಮುಗಿಸಿದ ಗುತ್ತಿಗೆದಾರರು ಈಗ ಬಿಲ್ ಪಾಸಾಗದೆ ಪರಿತಪಿಸು ವಂತಾ ಗಿದೆ. ೨೫ ಲಕ್ಷ ರೂ. ಕಾಮಗಾರಿ ನಿರ್ವ ಹಿಸಿದ ಗುತ್ತಿಗೆದಾರರೊಬ್ಬರು ಸಾಲ ಗಾರರ ಕಾಟದಿಂದ ಆಘಾತಕ್ಕೊಳಗಾಗಿ ಆಸ್ಪತ್ರೆಯ ವಾಸಿಯಾಗುವಂತಹ ಕೊಡು ಗೆಯನ್ನು ಮನಪಾ ಆಡಳಿತ ಗಾರರು ನೀಡಿದ್ದಾರೆ ಎಂದರೆ ಇವರ ಸೇವಾ ಕೈಂಕರ್ಯವನ್ನು ಅಂದಾ ಜಿಸ ಬಹುದು. ನಗರದ ಪ್ರಮುಖ ರಸ್ತೆಗಳಿಗೆ ಕಾಂಕ್ರೀಟ್ ಹಾಕಿದ್ದು ಬಿಟ್ಟರೆ ನಗರದ ಒಳ ಪ್ರದೇಶಗಳ ಸಂಪರ್ಕ ರಸ್ತೆಗಳ ಸ್ಥಿತಿ ದಯನೀಯವಾಗಿಯೇ ಮುಂದು ವರಿದೆ. ಕಳೆದ ಮಳೆಗಾಲದ ಸ್ಥಿತಿಯೇ ಈ ಬಾರಿಯೂ ಮುಂದು ವರಿಯುವ ಲಕ್ಷಣಗಳು ಕಾಣಿಸುತ್ತಿವೆ. ಹಿಂದಿನ ಮೇಯರ್ ಮಾಡಿದ ತಪ್ಪುಗಳನ್ನು ತನ್ನ ತಲೆಮೇಲೆ ಹಾಕಿಕೊಳ್ಳಲು ಈಗಿನ ಮೇಯರ್ ಸಿದ್ದರಾಗಬೇಕಿದೆ.

Advertisements