ಗಂಡು ವೇಶ್ಯೆಯ ಹೈಟೆಕ್ ದಂಧೆ

Posted on April 11, 2011

0


ಮಂಗಳೂರು: ಎಚ್‌ಐವಿ ಬಾಧಿತ ಸಲಿಂಗಕಾಮಿ ಯುವ ಕನೊಬ್ಬ ಮಹಿಳೆಯರ ವೇಷ ತೊಟ್ಟು ವೇಶ್ಯಾ ದಂಧೆ ನಡೆಸು ತ್ತಿರುವ ಕುತೂಹಲ ಕಾರಿ ಸುದ್ದಿ ಸೆಂಟ್ರಲ್ ಮಾರು ಕಟ್ಟೆ ಬಳಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಯುವಕನ ಈ ಕೃತ್ಯ ಗಮನಿಸಿದ ಸ್ಥಳೀಯ ಅಂಗಡಿ ಮಾಲಕರು ಈತನಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನೂ ನೀಡಿ ದ್ದರೂ, ಅದನ್ನು ಕ್ಯಾರೇ ಅನ್ನದ ಈತ ದುಬೈ ಮಾರುಕಟ್ಟೆ ಬಳಿ ಇರುವ ಲಾಡ್ಜ್‌ನಲ್ಲಿ ತನ್ನ ದಂಧೆ ಮುಂದುವರಿಸಿದ್ದು ಈತನಿಂ ದಾಗಿ ಹತ್ತಾರು ಯುವಕರು ದಾರಿ ತಪ್ಪುತ್ತಿದ್ದಾರೆಂದು ತಿಳಿದುಬಂದಿದೆ.

ಕೃಷ್ಣಾ ಎಂಬ ಹೆಸರಿ ಟ್ಟುಕೊಂಡ ಈತ ರಾತ್ರಿ ವೇಳೆ ನಗ್ಮಾ, ಸೋನು, ಸ್ಮಿತಾ ಹೀಗೆ ನಾನಾ ಹೆಸರು ಗಳನ್ನು ಇಟು ಕೊಂಡು, ಬೆಲೆ ಬಾಳುವ ಸೀರೆಗಳನ್ನುಟ್ಟು ಅವುಗಳಿಗೆ ಹೊಂದಿಕೆಯಾಗುವ ಬ್ಯಾಂಗಲ್ ಬ್ಯಾಗುಗಳನ್ನು ಹಾಕಿಕೊಂಡು ವ್ಯವಹಾರ ಕುದುರಿಸುತ್ತಿದ್ದಾನೆ ಎಂಬ ದೂರು ಕೇಳಿ ಬಂದಿದೆ. ನಗರದ ಕೇಂದ್ರ ಮಾರುಕಟ್ಟೆಗೆ ತರಕಾರಿ, ಹಣ್ಣು ಹಂಪಲುಗಳನ್ನು ದೂರದ ಊರಿನಿಂದ ತರುವ ಲಾರಿ ಚಾಲಕರು, ಕ್ಲೀನರ್‌ಗಳೇ ಈತನ ಬಹು ಗಿರಾಕಿ ಗಳಾಗಿದ್ದಾರೆ. ಇವರೆಲ್ಲ ವಿಶ್ರಾಂತಿ ಪಡೆಯುವ ವೇಳೆ ಇವರ ಬಳಿ ಬಂದು ವಯ್ಯಾರದಿಂದ ಮಾತನಾಡಿ ಅವರನ್ನು ಬುಟ್ಟಿಗೆ ಹಾಕಿಕೊಂಡು, ದುಬೈ ಮಾರುಕಟ್ಟೆಯ ನೆಲ ಅಂತಸ್ತಿನ ಮೂಲೆ ಮೂಲೆಗೆ ಕರೆದುಕೊಂಡು ಹೋಗಿ ಸುಖ ನೀಡುವ ನೆಪದಲ್ಲಿ ಅವರನ್ನು ದೋಚಿ ಬಿಡುತ್ತಾನೆಂದು ಈತನಿಂದ ಬಲಾತ್ಕಾರದ ವಸೂಲಿಗೀಡಾದವರು ತಿಳಿಸಿದ್ದಾರೆ. ಹೆಣ್ಣು ಎಂದು ಈತನ ಹಿಂದೆ ಹೋದವರು ಬೇಡ ಬೇಡವೆಂದರೂ ಬಿಡದ ಈತನಿಂದ ಬಲವಂತದ ಪ್ರಕೃತಿ ವಿರುದ್ಧವಾದ ಲೈಂಗಿಕ ಸುಖ ಪಡೆದು ಬರುತ್ತಿದ್ದಾರೆ.

ಸಲಿಂಗಕಾಮಿಯಾಗಿಯೇ ಗುರುತಿಸಿಕೊಂಡಿರುವ ಕೃಷ್ಣ ಹಗಲಿನಲ್ಲಿ ಗಂಡ ಸರಂತೆ ಸಹಜ ವೇಷಭೂಷಣ ತೊಟ್ಟು ತನ್ನ ಕೆಲಸ ನಡೆಸುತ್ತಿದ್ದರೆ ರಾತ್ರಿ ವೇಳೆ ಮಾತ್ರ ಈತನ ಖಾಯಂ ಠಿಕಾಣಿ ಕೇಂದ್ರವಾಗಿರುವ ದುಬೈ ಮಾರ್ಕೇಟ್ ಬಳಿಯ ಲಾಡ್ಜ್‌ನಲ್ಲಿ ತನ್ನ ವೇಷ ಪರಿವರ್ತನೆಗೊಳಿಸಿ ಬೀದಿಗಿಳಿದು ಬಿಡುತ್ತಾ ನೆ, ಆರಂಭದಲ್ಲಿ ದುಬೈ ಮಾರ್ಕೇಟ್ ಬಳಿಯೇ ಸುತ್ತಾಡುತ್ತ ಲಾರಿ ಚಾಲಕರನ್ನು ಸೆಳೆಯಲು ಯತ್ನಿಸಿ ಅವರನ್ನು ದೋಚಿದ ಮೇಲೆ ನಗರಕ್ಕೆ ಸುತ್ತು ಹೊಡೆದು ಹೊಸ ಗಿರಾಕಿಗಳನ್ನು ಅನ್ವೇಷಿಸುತ್ತಾ ದುಬೈ ಮಾರ್ಕೇಟ್‌ನ ಸಂದಿಗೆ ಕರೆತರುತ್ತಾನೆ. ಹೀಗೆ ತಡರಾತ್ರಿ ಎರಡು ಗಂಟೆಯವರೆಗೆ ನಡೆಯುತ್ತಿದ್ದು ದಿನವೊಂದಕ್ಕೆ ಹತ್ತಾರು ಮಂದಿ ಈತನಿಂದ ಮೋಸ ಹೋಗುತ್ತಲೇ ಇದ್ದಾ ರೆನ್ನಲಾಗುತ್ತಿದೆ. ವಾಸ್ತವವಾಗಿ ಕೃಷ್ಣನಿಗೆ ಹೆಚ್‌ಐವಿ ಇದ್ದು ಅದನ್ನು ಮರೆ ಮಾಚಿರುವ ಕೃಷ್ಣ, ಇತರ ಯುವಕರನ್ನು ಬಲವಂತದ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳು ತ್ತಿದ್ದಾನೆ. ಪ್ರಕೃತಿ ವಿರುದ್ದsವಾದ ಈ ಕ್ರಿಯೆಯಿಂದಾಗಿ ರಕ್ತ ಬದಲಾವಣೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕೃಷ್ಣನ ಜೊತೆ ಇನ್ನೂ ಇಬ್ಬರು ಇದ್ದು ಅವರು ಯಥಾ ವ್ಯವಹಾರಿಗಳಾಗಿದ್ದಾರೆ. ಆದರೆ ಇವರೂ ಎಚ್‌ಐವಿ ಬಾಧಿತರಾಗಿದ್ದು ಇತರರಿಗೂ ಇದನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ. ತಡರಾತ್ರಿವರೆಗೆ ಹೆಣ್ಣು ರೂಪದ ಗಂಡು ತಿರುಗುತ್ತಿದ್ದರೂ ಪೊಲೀಸರು ಮಾತ್ರ ತಮ್ಮ ಪಾಡಿಗೆ ತಾವಿದ್ದೇವೆ ಎಂದು ಮೌನವಹಿಸಿರುವುದು ಈ ದಂಧೆಗೆ ಹೆಚ್ಚಿನ ಕುಮ್ಮಕ್ಕು ಕೊಟ್ಟಿದೆ.

Advertisements
Posted in: Crime News