ಕೆಎಸ್ಸಾರ್ಟಿಸಿ ಸಿಬ್ಬಂದಿಯಿಂದ ಅಂಗವಿಕಲನಿಗೆ ಹಲ್ಲೆ

Posted on April 11, 2011

0


ಪುತ್ತೂರು: ಬುಡಕಟ್ಟು ಜನಾಂಗದ ಅಂಗವಿಕಲ ಯುವಕನೊಬ್ಬನಿಗೆ ವಿಟ್ಲದ ಕೆಎಸ್ಸಾರ್ಟಿಸಿ ಸಾರಿಗೆ ನಿಯಂತ್ರಣಾ ಧಿಕಾರಿ (ಟಿಸಿ) ಸೇರಿ ಎಂಟು ಮಂದಿಯ ತಂಡವೊಂದು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಘಟನೆ ನಿನ್ನೆ ನಡೆದಿದೆ.

ಬಂಟ್ವಾಳ ತಾಲೂಕಿನ ಕರೊಪ್ಪಾಡಿ ಗ್ರಾಮದ ವಿಟ್ಟನಡ್ಕ ಸಮೀಪದ ಮಾಂಪಾಡಿ ನಿವಾಸಿ ಚೋಮ ಕೊರಗರ ಪುತ್ರ ಗುರುವಪ್ಪ (೧೯) ಎಂಬ ವರೇ ಹಲ್ಲೆಗೊಳಗಾಗಿದ್ದು, ಇದೀಗ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಎಸ್‌ಆರ್‌ಟಿಸಿಯ ಟಿ.ಸಿ ವಾಸು ಹಾಗೂ ಇತರ ಎಂಟು ಮಂದಿ ಸೇರಿ ದೊಣ್ಣೆಯಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ. ಗುರುವಪ್ಪ ಅಂಗವಿಕಲರಾಗಿದ್ದು,ಫಿಟ್ಸ್ ರೋಗದಿಂದ ಬಳಲುತ್ತಿದ್ದರು. ನಿನ್ನೆ ಬೆಳಿಗ್ಗೆ ಮಂಗಳೂರಿಗೆ ಚಿಕಿತ್ಸೆಗೆಂದು ತೆರಳಿ ಕೆಸ್ಸಾರ್ಟಿಸಿ ಬಸ್‌ನಲ್ಲಿ ವಾಪಾಸು ಬರುತ್ತಿದ್ದ ವೇಳೆ ವಿಟ್ಲದ ಕೆಲಿಂಜ ಬಳಿ ತಲುಪುತ್ತಿದ್ದಂತೆ ಫಿಟ್ಸ್ ಬಾದೆಗೊಳಗಾ ಗಿದ್ದ ಗುರುವಪ್ಪ ಪಕ್ಕದ ಪ್ರಯಾಣಿಕನ ಮೇಲೆ ಬಿದ್ದುಬಿಟ್ಟರು. ಇದರಿಂದ ಕುಪಿತ ಗೊಂಡ ಪ್ರಯಾಣಿಕ ವಿಟ್ಲ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದ. ಬಸ್ ವಿಟ್ಲದ ಕೆಎಸ್ಸಾ ರ್ಟಿಸಿ ತಲುಪುತ್ತಿದ್ದಂತೆ ಟಿ.ಸಿ ಹಾಗೂ ಎಂಟು ಮಂದಿಯ ತಂಡ ಈತನಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ. ನಂತರ ಗುರುವಪ್ಪರನ್ನು ೧೦೮ ಅಂಬ್ಯುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ತನ್ನಲ್ಲಿದ್ದ ಮೊಬೈಲ್ ಪೋನ್, ಮೂರು ಸಾವಿರ ರೂ. ಹಣವಿದ್ದ ಪರ್ಸ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಅಂಗವಿಕಲ ಪಾಸ್ ಬುಕ್‌ನ್ನು ಕಿತ್ತು ಕೊಂಡಿದ್ದಾರೆಂದು ಗುರುವಪ್ಪ ಪೊಲೀ ಸರಿಗೆ ಹಾಗೂ ಸಂಬಂಧಪಟ್ಟ ಮೇಲಧಿ ಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿ ದ್ದಾರೆ.

Advertisements
Posted in: Crime News