ಕುಕ್ಕುವಳ್ಳಿ ದಂಪತಿಗೆ ಕರ್ನಾಟಕ ಕಲಾಸಂಪದ ಪ್ರಶ ಸ್ತಿ

Posted on April 11, 2011

0


ಬೆಂಗಳೂರು: ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದ ವಿಶಿಷ್ಟ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಶಿಕ್ಷಕಿ ವಿದ್ಯಾ ಭಾಸ್ಕರ ರೈ ದಂಪತಿಗೆ ಕರ್ನಾಟಕ ಕಲಾಸಂಪದ ಪ್ರಶಸ್ತಿ ಪ್ರದಾನ ಮಾಡ ಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಿ.ಕೆ.ಚೌಟ ವಹಿಸಿ ದ್ದರು. ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರೊ.ಕೆ. ರಾಧಾಕೃಷ್ಣ ಅಭಿನಂದನಾ ಭಾಷಣ ಮಾಡಿದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಭಗವಾನ್ ದಾಸ್ ರೈ, ಚಿತ್ರ ನಿರ್ಮಾಪಕ ನವೀನ್ ಹೆಗ್ಡೆ ಉದ್ಯಮಿ ಶ್ರೀನಿವಾಸ ಸೂಡ, ಸುಧಾಕರ ಬನ್ನಂಜೆ, ಲಕುಮಿ ತಂಡದ ಕಿಶೋರ್ ಶೆಟ್ಟಿ ಅತಿಥಿಗಳಾಗಿದ್ದರು. ಕರ್ನೂರು ಸುಭಾಷ್ ರೈ ಸ್ವಾಗತಿ ಸಿದರು. ಮಧುಕರ ಶೆಟ್ಟಿ ವಂದಿಸಿ ದರು. ಹೆಚ್.ಕೆ.ನೈನಾಡು ಕಾರ್ಯಕ್ರಮ ನಿರೂಪಿಸಿದರು.

Advertisements
Posted in: State News