ಕರಾವಳಿ: ಅಲ್ಲಲ್ಲಿ ಧಾರಾಕಾರ ಮಳೆ

Posted on April 11, 2011

0


ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ ಭಾನುವಾರ ಅಪರಾಹ್ನ ಗುಡುಗು ಮಿಂಚಿನೊಂದಿಗೆ ಕರಾವಳಿಗೆ ಖರ ಸಂವತ್ಸರದ ಮೊದಲ ಮಳೆ ಸಿಡಿಲಿನ ಅರ್ಭಟದೊಂದಿಗೆ ಪ್ರವೇ ಶಿಸಿದೆ. ಮಂಗಳೂರು ನಗರ ಹಾಗೂ ಸುರತ್ಕಲ್ ಮತ್ತು ಬಜಪೆ ಪರಿಸರದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದೆ.

ಬೆಳ್ತಂಗಡಿ: ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನಿನ್ನೆ ಸಂಜೆ ಮಳೆಯಾಗಿದ್ದು, ಸಂಜೆ ಮೂರು ಗಂಟೆಯಿಂದಲೇ ಮೋಡ ಕವಿದಿತ್ತು. ಐದು ಗಂಟೆ ವೇಳೆ ಆರಂಭವಾದ ಮಳೆ ತಡರಾತ್ರಿವರೆಗೂ ಮುಂದುವರಿದಿತ್ತು. ಕೆಲವೆಡೆ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದ್ದು, ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

ವಿಟ್ಲ: ವಿಟ್ಲ ಹಾಗೂ ಕಡಬ ಸುತ್ತಲಿನ ಪರಿಸರದಲ್ಲಿ ಭಾನುವಾರ ಸಂಜೆ ಗುಡುಗು-ಮಿಂಚು ಸಹಿತ ಮಳೆಯಾಗಿದ್ದು ಕೆಲವೆಡೆ ಉತ್ತಮವಾಗಿತ್ತು.

ಕುಂದಾಪುರ: ತಾಲೂಕಿನಾದ್ಯಂತ ನಿನ್ನೆ ಸಂಜೆ ಮಳೆಯಾಗಿದ್ದು, ಗುಡುಗು, ಮಿಂಚಿನಿಂದ ಕೂಡಿತ್ತು. ಹೊಸಂಗಡಿ, ಅಮಾಸೆಬೈಲು, ಸಿದ್ದಾಪುರ, ಗಂಗೊಳ್ಳಿ, ಹಾಲಾಡಿ ಸೇರಿದಂತೆ ಹಲವಡೆ ಉತ್ತಮ ಮಳೆಯಾಗಿದೆ.

ವೇಣೂರು: ವೇಣೂರು ಹಾಗೂ ಆಳದಂಗಡಿ ಪರಿಸರದಲ್ಲಿ ನಿನ್ನೆ ಅಪರಾಹ್ಮ ಮಳೆಯಾಗಿದ್ದು, ಗುಡುಗಿ ನಿಂದ ಕೂಡಿತ್ತು. ನಾರಾವಿ ಪರಿಸರಲ್ಲಿ ಧಾರಾಕಾರ ಮಳೆ ಸುರಿದಿದೆ. ಸಿಡಿಲಿನ ಅರ್ಭಟದಿಂದಾಗಿ ಅಲ್ಲಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.

Advertisements