ಕಂದುಕ: ವರ್ಷಾವಧಿ ಕೋಲ ಮಹೋತ್ಸವ

Posted on April 11, 2011

0


ಮಂಗಳೂರು: ಶ್ರೀ ದೈವ-ದೇವತೆಗಳ ಸೇವಾ ಸಮಿತಿ, ಕೊರತಿ, ಗುಳಿಗ, ಕೋರ‍್ದಬ್ಬು ದೈವಗಳ ದೇವಸ್ಥಾನ ಕಂದುಕ, ಮಂಗಳೂರು ಇದರ ವರ್ಷಾವಧಿ ಕೋಲ ಮಹೋತ್ಸವವು ಎ.೧೫ರಿಂದ ೧೭ರ ವರೆಗೆ ನಡೆಯಲಿದೆ.

ಎ.೧೫ರಂದು ಶುಕ್ರವಾರ ರಾತ್ರಿ ೭ಕ್ಕೆ ಭಂಡಾರ ಮೆರವಣಿಗೆ, ರಾತ್ರಿ ೯ಕ್ಕೆ ಏರುವುದು ನಂತರ ಕೊರತಿ, ಗುಳಿಗ ದೈವಗಳ ನೇಮ, ಕೆಂಡ ಸೇವೆ ನಡೆಯಲಿದ್ದು, ಎ.೧೬ ರಂದು ಶನಿವಾರ ಪಂಜುರ್ಲಿ ದೈವದ ನೇಮ, ನಂತರ ಕೋರ‍್ದಬ್ಬು ಮತ್ತು ತನ್ನಿಮಾನಿಗ ದೈವಗಳ ನೇಮ ನಡೆಯಲಿದೆ. ಎ.೧೭ ರಂದು ಭಾನುವಾರ ಭಂಡಾರ ಇಳಿಯುವುದು.

೪೫ ವರ್ಷಗಳಿಂದ ನಡೆದುಕೊಂಡು ಬಂದ ಭಂಡಾರದ ಮೆರವಣಿಗೆಯು ದೈವಸ್ಥಾನದಿಂದ ಹೊರಟು ಹಿಂದಿನ ಮಾರ್ಗದಿಂದ ಹೋಟೆಲ್ ಗೇಟ್‌ವೇ ಅಡ್ಡರಸ್ತೆಯಾಗಿ ಸ್ಟೇಟ್‌ಬ್ಯಾಂಕ್, ಹೊಟೇಲ್ ಸ್ವಾಗತ್ ಬಳಿಯಾಗಿ ದೈವಸ್ಥಾನಕ್ಕೆ ಬರಲಿರುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements