ಉದ್ಯೋಗ ಖಾತರಿ ಅವ್ಯವಹಾರ ಸಜಿಪಮೂಡ ಗ್ರಾ,ಪಂ.ಗೆ ದಂಡ

Posted on April 11, 2011

0


ಮಂಗಳೂರು: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಹಣ ಪಾವತಿ ಮಾಡದೆ ಬಾಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಸಜಿಪಮೂಡು ಗ್ರಾ,ಪಂ. ಕಾರ್ಯದರ್ಶಿಗೆ ಜಿಲ್ಲಾ ಓಂಬುಡ್ಸ್‌ಮನ್ ನ್ಯಾಯಾಲಯ ದಂಡ ವಿಧಿಸಿದೆ.

ಮಹಾಬಲ ರೈ ಹಾಗೂ ಇತರ ಹತ್ತು ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆಲಸ ಮಾಡಿದ ಕೂಲಿ ಹಣ ಪಾವತಿ ಮಾಡಿಲ್ಲ ಎಂದು ಗ್ರಾ.ಪಂ. ವಿರುದ್ಧ ಓಂಬುಡ್ಸ್‌ಮನ್ ನ್ಯಾಯಾಲಯಕ್ಕೆ ದೂರಲಾಗಿತ್ತು. ಬರ್ಕೆಬೈಲು ಎಂಬಲ್ಲಿನ ಕಿಂಡಿ ಅಣೆಕಟ್ಟು ಕಾಮಗಾರಿಯಲ್ಲಿ ಇವರು ದುಡಿದಿದ್ದರು. ಕೂಲಿ ಕಾರ್ಮಿಕರಿಗೆ ೯೬,೪೧೬ ರೂ. ಹಣ ನೀಡಬೇಕಾಗಿತ್ತು. ಆದರೆ ಕೇವಲ ೧೪,೩೦೦ ರೂ. ಮಾತ್ರ ಪಾವತಿ ಮಾಡಲಾಗಿತ್ತು. ತನಿಖೆಯ ವೇಳೆ ಕಾರ್ಯದರ್ಶಿ ಕೆಲಸ ಸರಿಯಾಗಿ ನಡೆದಿಲ್ಲ, ಹೀಗಾಗಿ ಕೂಲಿ ಹಣ ಪಾವತಿ ಮಾಡಿಲ್ಲ ಎಂದಿದ್ದು, ಓಂಬುಡ್ಸ್‌ಮನ್ ಕಾರ್ಯದರ್ಶಿಗೆ ದಂಡ ವಿಧಿಸಿದೆ.

Advertisements
Posted in: Crime News