ಅತಿ ಹೆಚ್ಚು ಭ್ರಷ್ಟ ದೇಶ ಪಟ್ಟ ಭಾರತಕ್ಕೆ ನಾಲ್ಕ ನೇ ಸ್ಥಾನ!

Posted on April 11, 2011

0


ಶಾಂಘೈ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ಅವರ ಹೋರಾಟದ ಫಲವಾಗಿ ಜನಲೋಕ ಪಾಲ ಮಸೂದೆ ಜಾರಿಗೆ ಸರಕಾರ ಗ್ರೀನ್ ಸಿಗ್ನಲ್ ಸಿಕ್ಕಿರುವ ನಡುವೆಯೇ ಭ್ರಷ್ಟಾಚಾರದಲ್ಲಿ ಭಾರತ ೪ನೇ ಸ್ಥಾನಕ್ಕೆ ಜಿಗಿದಿರುವ ಅಂಶ ಬೆಳಕಿಗೆ ಬಂದಿದೆ.

ಹಾಂಗ್‌ಕಾಂಗ್ ಮೂಲದ ಬಿಸಿನೆಸ್ ಕನ್ಸಲ್ಟೆನ್ಸಿ ರಚಿತ ಪೊಲಿಟಿಕಲ್ ಮತ್ತು ಎಕಾನಾಮಿಕ್ ರಿಸ್ಕ್ (ಪಿಇಆರ್‌ಸಿ) ನಡೆಸಿರುವ ಸಮೀಕ್ಷೆಯ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ಮುಳುಗಿರುವ ೧೬ ದೇಶಗಳ ಪೈಕಿ ಭಾರತ ೪ನೇ ಸ್ಥಾನದಲ್ಲಿದೆ.

ಪ್ರಥಮ ಸ್ಥಾನದಲ್ಲಿ ಕಾಂಬೋ ಡಿಯಾ (೯.೨೭), ದ್ವಿತೀಯ ಇಂಡೋ ನೇಷಿಯಾ (೯.೨೫). ತೃತೀಯ ಸ್ಥಾನ ಫಿಲಿಫೈನ್ಸ್ (೮.೯) ಹಾಗೂ ನಾಲ್ಕನೇ ಸ್ಥಾನದಲ್ಲಿ ಭಾರತ (೮.೬೭) ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ವಿಯೆಟ್ನಾಂ (೮.೩), ಚೀನಾ (೭.೯೩), ಥಾಯ್ಲೆಂಡ್ (೭.೫೫). ಅಮೆರಿಕ (೨.೩೯) ಜಪಾನ್ (೧.೯೦), ಆಸ್ಟ್ರೇಲಿಯಾ (೧.೩೯) ಹಾಂಗ್‌ಕಾಂಗ್(೧.೧೦) ಮತ್ತು ಸಿಂಗಾಪುರ(೦.೩೭) ಇದೆ.

ಅದೇ ರೀತಿ ಭಾರತದಲ್ಲಿನ ರಾಜ ಕಾರಣಿಗಳು ಮತ್ತು ನಾಗರಿಕರು ರಾಷ್ಟ್ರ ಮಟ್ಟದ ರಾಜಕಾರಣಿಗಳು ಹಾಗೂ ನಾಗರಿಕರಿಗಿಂತ ಹೆಚ್ಚು ಭ್ರಷ್ಟರು(೯.೨೫) ಎಂದು ವರದಿ ತಿಳಿಸಿದೆ.

ಭಾರತದ ನಾಗರಿಕ ಸೇವಾ ಅಧಿ ಕಾರಿಗಳೂ ಸಹ ಹೆಚ್ಚು ಭ್ರಷ್ಟರಾಗಿದ್ದು, ನಾಗರಿಕ ಸೇವಾ ಅಧಿಕಾರಿಗಳೂ ಕೂಡ ಆ ಸಾಲಿಗೆ ಸೇರಿದ್ದಾರೆ. ಇಲ್ಲಿಯೂ ಭಾರತ ನಾಗರಿಕ ಸೇವಾ ಅಧಿಕಾರಿಗಳೇ ಹೆಚ್ಚು ಭ್ರಷ್ಟರು ಎಂದು ವರದಿ ವಿವರಿಸಿದೆ. ಕೇಂದ್ರ ಸರಕಾರ ಹಗರಣಗಳ ಸರಮಾಲೆ ಯಿಂದ ೨ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಆಯೋಜನೆಯಲ್ಲಿ ನಡೆದ ಹಗರಣ, ಸೇನಾ ಅಧಿಕಾರಿಗಳನ್ನೊಳಗೊಂಡ ಭೂ ಹಗರಣ ಮತ್ತು ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ವರದಿ ಒತ್ತು ನೀಡಿದೆ.

Advertisements