ಕೊಲೆ ಸಂಚು: ಮಹಾರಾಷ್ಟ್ರ ಪುತ್ರನ ಬಂಧನ

Posted on April 9, 2011

0


ಮುಂಬಯಿ: ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕೈಗಾರಿಕಾ ಮಂತ್ರಿ ನಾರಾಯಣ ರಾಣೆಯವರ ಪುತ್ರನನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಶೂಟೌಟ್‌ಗೆ ನಲ್ಲಿ ಭಾಗಿಯಾಗಿರುವ ನಿತೇಶ್ ರಾಣೆ ಹಾಗೂ ಇತರೆ ಇಬ್ಬರ ಮೇಲೆ ತನಿಖಾ ತಂಡ ಎಫ್‌ಐಆರ್ ದಾಖಲಿಸಿಕೊಂಡಿದೆ.
ಎನ್‌ಜಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿಂಟು ಶೇಖ್ ಮೇಲೆ ನಿತೇಶ್ ಗುಂಡಿನ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ತದ ನಂತರ ದೂರನ್ನು ಬಾಂಬೆ ಹೈ ಕೋರ್ಟು ಸಿಬಿಐ ತನಿಖೆಗೆ ನೀಡಿತ್ತು. ಅಲ್ಲದೆ ನಿತೇಶ್‌ಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಮಾರ್ಚ್ ೨೪ರಂದು ಹೈ ಕೋರ್ಟು ನಿತೇಶ್ ವಿರುದ್ಧದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.

Posted in: National News