ಆಪ್ತ ಸಹಾಯಕನಿಗೆ ಕಪಾಳಮೋಕ್ಷ ಮಾಡಿದ ಆಂಧ್ರ ಮಂತ ್ರಿ

Posted on April 9, 2011

0


ಹೈದರಾಬಾದ್: ಮೀಟಿಂಗ್ ಸಮಯದಲ್ಲಿ ಮೊಬೈಲ್ ಫೋನ್ ಸ್ವೀಕರಿಸಲು ತಡವರಿಸಿದ ಪರಿಣಾಮ ಆಂಧ್ರದ ಕೈಮಗ್ಗ ಮತ್ತು ಜವಳಿ ಖಾತೆ ಮಂತ್ರಿ ಪಿ. ಶಂಕರ್ ರಾವ್ ತನ್ನ ಆಪ್ತ ಸಹಾಯಕನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ವಿಜಯನಗರಂ ಜಿಲ್ಲೆಯ ಬೊಬ್ಬಿಲಿ ನಗರದಲ್ಲಿ ನಡೆದ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಸಚಿವರ ಸಹಾಯಕ ವೆಂಕಟೇಶ್‌ಗೆ ಅಧಿಕಾರಿಗಳ ಮತ್ತು ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿಯೇ ಕಪಾಳಮೋಕ್ಷ ನಡೆದಿದೆ.
ನಗರದಲ್ಲಿ ನಡೆದ ಕೈಗಾರಿಕೆಗಳ ಅಭಿವೃದ್ಧಿಗಳ ಬಗ್ಗೆ ಮಾತನಾಡುತ್ತಿದ್ದ ಸಚಿವರಿಗೆ ಬಂದಿರುವ ಮೊಬೈಲ್ ಕರೆಯಿಂದ ಕೊಂಚ ಅಸಮಾಧಾಗೊಂಡಿದ್ದರು. ತಕ್ಷಣವೇ ಸ್ಥಳಕ್ಕೆ ವೆಂಕಟೇಶ್ ಆಗಮಿಸಿದರೂ, ಆತನ ಕೆನ್ನೆಗೊಂದು ಬಾರಿಸಿಯೇ ಬಿಟ್ಟರು.
ಈ ಘಟನೆಯಿಂದ ವಿಚಲಿತಗೊಂಡ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ವಿರೋಧ ಪಕ್ಷ ಹಾಗೂ ಸರಕಾರಿ ನೌಕರರ ಸಂಘ ರಾವ್ ಅವರು ಕ್ಷಮಾಪಣೆ ಯಾಚಿಸುವಂತೆ ಒತ್ತಾಯಿಸಿದರು.
ಈ ಹಿಂದೆ, ಪೊಲೀಸ್ ಅಧಿಕಾರಿಗೂ ಕಪಾಳಮೋಕ್ಷ ನಡೆದಿದ್ದು, ಸಚಿವರು ಶಾರ್ಟ್ ಟೆಂಪರ್‌ನಿಂದಲೇ ಪ್ರಚಲಿತರಾದರು.

Advertisements
Posted in: National News