ಹಲ್ಲೆ ಆರೋಪ: ಬಾಲಕನಿಗೆ ಜಾಮೀನು

Posted on April 7, 2011

0


ಪುತ್ತೂರು: ಕೂಲಿ ಕಾರ್ಮಿಕರೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯಾಗಿ ಬಂಧಿತನಾಗಿದ್ದ ಬಾಲಾಪರಾಧಿ ಬಾಲಕನೊಬ್ಬನನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ನಿವಾಸಿ ಕೂಲಿಕಾರ್ಮಿಕ ವಾಸಪ್ಪ ಎಂಬವರ ಮೇಲೆ ಕೆಲ ದಿನಗಳ ಹಿಂದೆ ಶರತ್ ಶೆಟ್ಟಿ ಎಂಬ ಬಾಲಕನೊಬ್ಬ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಹಲ್ಲೆ ಆರೋಪದಲ್ಲಿ ಬಾಲಕನನ್ನು ಬಂಧಿಸಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಜಾಮಿನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಮಹೇಶ್ ಕಜೆ, ಕಿಶೋರ್ ಕೊಳತ್ತಾಯ ಹಾಗೂ ಪ್ರಸಾದ್ ಕುಮಾರ್ ರೈ ವಾದಿಸಿದ್ದರು.

Posted in: Crime News