ಯುವರಾಜ್ ಸಂಬಂಧ ಅಲ್ಲಗಳೆದ ಅಮೀಷಾ

Posted on April 7, 2011

0


ಮುಂಬೈ: ಶ್ರೀಲಂಕಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭ ಸರಣಿ ಶ್ರೇಷ್ಠ ಯುವರಾಜ್ ಸಿಂಗ್ ವಿಶೇಷ ಅತಿಥಿಯಾಗಿ ಮೈದಾನದಲ್ಲಿ ಕಾಣಿಸಿ ಕೊಂಡಿದ್ದ ಬಾಲಿವುಡ್ ನಟಿ ಅಮೀಷಾ ಪಟೇಲ್ ಯುವಿ ಜೊತೆಗೆ ಯಾವುದೇ ಅಂತಹ ಸಂಬಂಧ ಇಲ್ಲ, ಕೇವಲ ಗೆಳತಿಯಾಗಿ ಭಾಗವಹಿಸಿದ್ದೆ ಹಾಗೂ ಇದು ವಿಶ್ವಕಪ್ ಫೈನಲ್ ಪಂದ್ಯವಾದ ಕಾರಣ ನಾನು ಇಲ್ಲಿಗೆ ವಿಶೇಷ ಆಸಕ್ತಿಯಿಂದ ಆಗಮಿಸಿದ್ದೆ ಎಂದು ಅಮೀಷಾ ಸ್ಪಷ್ಟ ಪಡಿಸಿದ್ದಾಳೆ. ಅಮಿಷಾ ಹಾಗೂ ಯುವಿ ಸಂಬಂಧದ ಬಗ್ಗೆ ಎದ್ದಿರುವ ಕುತೂಹಲಕ್ಕೆ ತೆರೆ ಎಳೆಯಲು ಅಮಿಷಾ ನಿರ್ಧರಿಸಿದ್ದಾಳೆ.

ಉತ್ತಮ ಗೆಳೆಯನಾಗಿರುವ ಯುವರಾಜ್ ಸಿಂಗ್ ನನಗೆ ವಿಶೇಷ ಆಮಂತ್ರಣವನ್ನು ನೀಡಿ ಪಂದ್ಯಕ್ಕೆ ಆಹ್ವಾನಿಸಿದ್ದ. ಹಾಗಾಗಿ ಪೆವಿಲಿಯನ್‌ನ ವಿಶೇಷ ಬಾಕ್ಸ್‌ನಲ್ಲಿ ರಣಬೀರ್ ಕಪೂರ್ ಹಾಗೂ ಸೈಫ್ ಅಲಿ ಖಾನ್ ಜೊತೆಗೂಡಿ ಯುವಿ ಪರ ಘೋಷಣೆಗಳನ್ನು ಕೂಗಿದೆ ಎಂದು ಅಮೀಷಾ ತಿಳಿಸಿದ್ದಾಳೆ.

Posted in: Sports News