ಪಾಂಗಾಳ ಸಿಎ ಬ್ಯಾಂಕ್‌ಗೆ ವಂಚನೆ

Posted on April 7, 2011

0


ಪಡುಬಿದ್ರಿ: ಇನ್ನಂಜೆ ಗ್ರಾಮದ ಸಿಎ ಬ್ಯಾಂಕಿಗೆ ಚಿನ್ನ ಎಂದು ನಕಲಿ ಚಿನ್ನವನ್ನು ಅಡವಿಟ್ಟು ವಂಚಿಸಲೆತ್ನಿಸಿದ ವಂಚಕನನ್ನು ಹಿಡಿದ ಶಾಖಾಧಿಕಾರಿ ಕಾಪು ಪೊಲೀ ಸರಿಗೆ ಒಪ್ಪಿಸಿದ್ದಾರೆ.

ಇನ್ನಂಜೆ ಗ್ರಾಮದ ಪಾಂಗಾಳ ಶಾಖೆಗೆ ಮಂಗಳವಾರ ಹಂಝ ಎಂಬಾತ ನಕಲಿ ಚಿನ್ನದ ಬಳೆ ನೀಡಿ ಸಾಲ ನೀಡು ವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಬಳೆಯ ಅಸಲಿಯತ್ತನ್ನು ಪರೀಕ್ಷಿಸಲಾಗಿ, ಇದು ನಕಲಿ ಚಿನ್ನ ಎಂದು ರುಜುವಾತಾದ ಹಿನ್ನೆಲೆಯಲ್ಲಿ ಬ್ಯಾಂಕಿನ ಶಾಖಾಧಿಕಾರಿ ಗೋಪಾಲಕೃಷ್ಣ ಎಂಬವರು ಕಾಪು ಠಾಣೆ ಯಲ್ಲಿ ದೂರು ಸಲ್ಲಿಸಿದ್ದಾರೆ.

Posted in: Crime News