ದುಷ್ಕರ್ಮಿಗಳಿಂದ ಮನೆಗೆ ಕಲ್ಲೆಸೆತ

Posted on April 7, 2011

0


ಮಂಜೇಶ್ವರ: ಬಿಜೆಪಿ ಬೆಂಬಲಿ ಗರೊಬ್ಬರ ಮನೆಗೆ ನಿನ್ನೆ ಮುಂಜಾನೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಕಲ್ಲೆಸೆದು ಪರಾರಿಯಾಗಿದ್ದು ಕಿಟಕಿ ಗಾಜುಗಳು ಪುಡಿಯಾಗಿವೆ.

ಉದ್ಯಾವರ ಮೂಡ ಜೆಎಂ ರೋಡ್‌ನ ಜೈನುಲ್ ಹಾಬಿದ್ ಎಂಬ ವರ ಮನೆಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದು ಮನೆಗೆ ಹಾನಿಯಾಗಿದೆ.

ತಡರಾತ್ರಿ ಜೈನುಲ್ ಹಾಬಿದ್ ಅವರ ಮೊಬೈಲ್ ಕರೆಯೊಂದು ಬಂದಿದ್ದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಆ ಬಳಿಕ ಮುಂಜಾನೆ ಐದು ಗಂಟೆಯ ಸುಮಾ ರಿಗೆ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳಿಬ್ಬರು ಮನೆಗೆ ಕಲ್ಲೆಸೆದು ಹಾನಿ ಮಾಡಿ ಪರಾರಿಯಾಗಿದ್ದಾರೆ.

ಜೈನುಲ್‌ಹಾಬಿದ್ ಕೆಲವು ದಿನಗಳ ಹಿಂದೆ ಬೆಂಬಲಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದು ಇದೇ ಗುಂಗಿ ನಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈನುಲ್ ಹಾಬಿದ್ ಮನೆಗೆ ಬಿಜೆಪಿ ಅಭ್ಯರ್ಥಿ ಸುರೇಂದ್ರನ್, ನಾಯಕರಾದ ಪದ್ಮನಾಭ ಕಡಪ್ಪೂರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Posted in: Crime News