ತಂಡದಿಂದ ಕೊಕ್: ಕಣ್ಣೀರಿಟ್ಟ ರಜಾಕ್

Posted on April 7, 2011

0


ಕರಾಚಿ: ಮುಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಗೆ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಪಾಕಿಸ್ತಾನ ಆಲ್‌ರೌಂಡರ್ ಅಬ್ದುಲ್ ರಜಾಕ್ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕಣ್ಣೀರಿಡುವ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದಾರೆ.

ರಜಾಕ್‌ರೊಂದಿಗೆ ಟೂರ್ನಿಯಲ್ಲಿ ಕಳಪೆ ನಿರ್ವಹಣೆ ತೋರಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮೆನ್ ಕಮ್ರಾನ್ ಅಕ್ಮಲ್‌ಗೆ ಕೂಡ ಆಯ್ಕೆಗಾರರು ಕೊಕ್ ನೀಡಿದ್ದಾರೆ. ಪ್ರತೀ ಪಂದ್ಯ ದಲ್ಲಿ ನನಗೆ ಎಂಟರ ಕ್ರಮಾಂಕದಲ್ಲಿ ಆಡಲು ಸೂಚಿಲಾಗುತ್ತದೆ. ಬೌಲಿಂಗ್ ನಲ್ಲೂ ಕೂಡ ನನಗೆ ಹೆಚ್ಚಿನ ಅವಕಾಶ ನೀಡುತ್ತಿಲ್ಲ. ಹೀಗಿರುವಾಗ ಹೇಗೆ ನನ್ನ ಆಟವನ್ನು ಪ್ರದರ್ಶಿಸಲಿ. ನಾನು ಮೂರರ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದರೂ ನನಗೆ ಭಡ್ತಿ ಕೊಡಲು ತಂಡದ ಆಯ್ಕೆಗಾರರು ಸೂಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ರಜಾಕ್ ದೇಹ ಸ್ಪಂದಿಸಿದರೆ ಇನ್ನೂ ಎರಡು ವರ್ಷಗಳ ಕ್ರಿಕೆಟ್ ಆಡಲು ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

Posted in: Sports News