ಕೋಚ್ ಹುದ್ದೆ: ವರದಿ ತಳ್ಳಿಹಾಕಿದ ವಾರ್ನ್

Posted on April 7, 2011

0


ಮುಂಬೈ: ಭಾರತದ ಕೋಚ್ ಸ್ಥಾನದಿಂದ ನಿರ್ಗ ಮಿಸು ತ್ತಿರುವ ಗ್ಯಾರಿ ಕಸ್ಟನ್ ಸ್ಥಾನವನ್ನು ತುಂಬಲು ಶೇನ್ ವಾರ್ನ್ ತಯಾರಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ತಳ್ಳಿಹಾಕಿದ್ದಾರೆ.

ಕೋಚ್ ಹುದ್ದೆ ನಿರ್ವಹಿಸಲು ನನಗೆ ಯಾವುದೇ ರೀತಿಯ ಆಸಕ್ತಿಯಿಲ್ಲವಾಗಿದ್ದು ನಾನು ಆ ರೀತಿ ಹೇಳಿಯೇ ಇಲ್ಲ ಎಂದು ವಾರ್ನ್ ಸ್ಪಷ್ಟಪಡಿಸಿದ್ದಾರೆ. ಇದೊಂದು ಕಷ್ಟಕರ ವಾದ ನಿರ್ಧಾರವಾಗಲಿದೆ. ಆದರೆ ಭಾರತ ತಂಡ ಉತ್ತಮ ವಾಗಿ ಆಡುತ್ತಿರುವುದರಿಂದ ಕೋಚ್ ಹುದ್ದೆ ನಿರ್ವಹಿಸಲು ಯಾವುದೇ ತೊಂದರೆಯಿಲ್ಲ. ಅದನ್ನು ನಿರ್ವಹಿಸಲು ನಾನು ತಯಾರಿರುವುದಾಗಿ ವಾರ್ನ್ ಹೇಳಿದ್ದಾರೆಂದು ಭಾರತೀಯ ಮಾಧ್ಯಮಗಳು ಹೇಳಿದ್ದವು.

Posted in: Sports News