ಕೂಡಿ ಬಾರದ ಪುತ್ರಿಯ ವಿವಾಹ: ತಂದೆಯ ಆತ್ಮಹತ್ಯೆ

Posted on April 7, 2011

0


ಪುತ್ತೂರು: ಪುತ್ರಿಯ ವಿವಾಹ ಸಂಬಂಧ ಕೂಡಿ ಬಾರದ ಹಿನ್ನೆಲೆಯಲ್ಲಿ ಮನನೊಂದು ವೃದ್ದ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳ ವಾರ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದಲ್ಲಿ ನಡೆದಿದೆ.

ನಿಡ್ಪಳ್ಳಿ ಗ್ರಾಮದ ಪಳಂಬೆ ನಿವಾಸಿ ನಾರಾಯಣ ಗೌಡ(೭೦) ಆತ್ಮಹತ್ಯೆ ಮಾಡಿ ಕೊಂಡ ವ್ಯಕ್ತಿ. ನಾರಾಯಣ ಗೌಡರ ಪುತ್ರಿಗೆ ಎರಡು ವಾರದ ಹಿಂದೆ ವಿವಾಹಕ್ಕೆ ಸಂಬಂಧಿಸಿ ಮಾತುಕತೆ ನಡೆದಿತ್ತು. ಆದರೆ ಆ ಸಂಬಂಧ ಕೂಡಿ ಬಾರದೆ ಕಡಿದು ಹೋಗಿತ್ತು. ಇದರಿಂದ ತೀವ್ರ ನೊಂದಿದ್ದ ಅವರು ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದರು. ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ತಂದು ದಾಖಲಿಸಿ ಚಿಕಿತ್ಸೆ ನೀಡಲಾ ಗಿತ್ತು. ಆದರೆ ಅವರು ಚಿಕೆತ್ಸೆ ಫಲಕಾರಿ ಯಾಗದೆ ಅಲ್ಲಿ ಮೃತಪಟ್ಟರು.

Posted in: Crime News