ಉಳ್ಳಾಲ ಮಸೀದಿ ಸಿಬ್ಬಂದಿಯ ಲಕ್ಷಾಂತರ ವಂಚನೆ: ಬ ಂಧನ

Posted on April 7, 2011

0


ಮಂಗಳೂರು: ಮಸೀದಿಗೆ ದೇಣಿಗೆಯಾಗಿ ನೀಡುತ್ತಿದ್ದ ಹಣವನ್ನು ನುಂಗಿ ಹಾಕಿದ ಮಸೀದಿ ಸಿಬ್ಬಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಅಳೇಕಲದ ಅಬ್ದುಲ್ ಖಾದರ್ ಶಮೀರ್ ಬಂಧಿತ ಆರೋಪಿ. ಕಳೆದ ಕೆಲ ವರ್ಷಗಳಿಂದ ಇತಿಹಾಸ ಪ್ರಸಿದ್ಧ ಸೈಯ್ಯಿದ್ ಮದನಿ ದರ್ಗಾದಲ್ಲಿ ದೇಣಿಗೆ ಸಂಗ್ರಹ ವಿಭಾಗದಲ್ಲಿ ಬಿಲ್ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಈ ವೇಳೆ ಜನರು ಮಸೀದಿಗೆ ದೇಣಿಗೆಯಾಗಿ ನೀಡುತ್ತಿದ್ದ ಹಣಕ್ಕೆ ರಶೀದಿಯನ್ನು ನೀಡದೆ ತನ್ನ ಜೇಬಿಗೆ ಹಾಕಿಕೊಳ್ಳು ತ್ತಿದ್ದನೆನ್ನಲಾಗಿದೆ. ಈತನ ವರ್ತನೆಯಿಂದ ಸಂಶಯಗೊಂಡ ಮಸೀದಿ ಸಿಬ್ಬಂದಿ ಈತನನ್ನು ವಿಚಾರಣೆಗೆ ತೆಗೆದು ಕೊಂಡಿದ್ದಾರೆ. ಆದರೆ ಲಕ್ಷಾಂತರ ರೂ. ಹಣವನ್ನು ನುಂಗಿರುವ ಈತ ಬಾಯ್ಬಿಡದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ನಿನ್ನೆ ಉಳ್ಳಾಲ ಪೊಲೀಸರು ಶಮೀರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಶಮೀರ್ ಮನೆಗೆ ತೆರಳಿದ ಪೊಲೀಸರಿಗೆ ಲ್ಯಾಪ್‌ಟಾಪ್, ಒಂದು ಸಾವಿರ ರೂ ನೋಟುಗಳು ಪತ್ತೆಯಾಗಿರುವ ಬಗ್ಗೆ ತಿಳಿದುಬಂದಿದೆ.

Posted in: Crime News