ಆಲಂಕಾರಿನಲ್ಲಿ ವಾಮಾಚಾರ!

Posted on April 7, 2011

0


ಮಂಗಳೂರು: ಸರ್ಕಾರಿ ಕಚೇರಿ, ವಿಧಾನ ಸೌಧ, ರಾಜಕಾರಣಿಗಳ ಮನೆ ಮುಂದೆ ನಡೆಯುತ್ತಿದ್ದ ವಾಮಾಚಾರ ಕೃತ್ಯಗಳು ಇದೀಗ ಸಣ್ಣ ಪೇಟೆಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ. ಕಡಬ ಪೇಟೆಯ ಬಸ್ ನಿಲ್ದಾಣದಲ್ಲಿ ಶರವೂರು ದೇವಳಕ್ಕೆ ಹೋಗುವ ದ್ವಾರದ ಬಳಿ ಕುರುಹು ಕಾಣಿಸಿಕೊಂಡಿದೆ. ತೆಂಗಿನಕಾಯಿ, ಕುಂಕುಮ, ಲೇಪಿತ ಲಿಂಬೆ, ತಗಡು, ದಾರ, ಒಂದು ಕಲ್ಲು ಗೋಚರಿಸಿದೆ. ತಿಂಗಳಲ್ಲಿ ಮೂರನೇ ಬಾರಿ ಈ ಕುರುಹು ಕಾಣಿಸಿಕೊಂಡಿದೆ. ಆಲಂಕಾರಿನ ಜನತೆಗೆ ಇದೊಂದು ತಮಾಷೆಯ ಸಂಗತಿಯಾಗಿದ್ದು, ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಸಂಶಯಿಸಲಾಗಿದೆ.

Posted in: Crime News