ಹುಸಿ ಬಾಂಬ್ ಕರೆ: ರೈಲು ಸಂಚಾರ ಸ್ಥಗಿತ

Posted on April 7, 2011

0


ಮಂಗಳೂರು: ಕಾಸರಗೋಡುವಿನ ತಳಂಗರೆ ಸೇತುವೆ ಬಳಿಯ ರೈಲು ಹಳಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ದೂರವಾಣಿ ಕರೆಯೊಂದು ಬಂದ ಹಿನ್ನಲೆಯಲ್ಲಿ ಕಾಞಂಗಾಡು-ಮಂಗಳೂರು ನಡುವೆ ಸಂಚಾರ ಕೆಲಸಮಯ ಸ್ಥಗಿತಗೊಂಡ ಘಟನೆ ಬುಧವಾರದಂದು ನಡೆದಿದೆ.ಬುಧವಾರದಂದು ಮಧ್ಯಾಹ್ನ ಕಾಸರಗೋಡು ರೈಲ್ವೇ ಕಚೇರಿಗೆ ಬಂದ ಅನಾಮೇಧೆಯ ವಿದೇಶಿ ದೂರವಾಣಿ ಕರೆಯೊಂದು ಬಂದಿದ್ದು ಈ ಕರೆಯಿಂದಾಗಿ ರೈಲು ಸ್ಥಗಿತಗೊಂಡು ಅವಾಂತರ ಸೃಷ್ಟಿಯಾಗಲು ಕಾರಣವಾಯಿತು. ಕಾಸರಗೋಡುವಿಗೆ ಬರುತ್ತಿದ್ದ ರೈಲನ್ನು ಮಂಜೇಶ್ವರ ನಿಲ್ದಾಣದಲ್ಲಿ, ಮಂಗಳೂರಿಗೆ ತೆರಳಬೇಕಿದ್ದ ರೈಲನ್ನು ಕಾಞಂಗಾಡು ರೈಲು ನಿಲ್ದಾಣದಲ್ಲಿ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ನಂತರ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ತಪಾಸಣೆ ನಡೆಸಿದರೂ ಯಾವುದೇ ಸ್ಪೋಟಕ ಪತ್ತೆಯಾಗಿರಲಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆಯೆಂದು ನಿರ್ಧರಿಸಿ ರೈಲು ಸಂಚಾರವನ್ನು ಪುನಾರಂಬಿಸಲಾಯಿತು.

Advertisements