ಸರಕಾರದ ನಿಯಮಕ್ಕೆ ಕಂಗಾಲಾದ ಪಡಿತರ ಚೀಟಿದಾರರು

Posted on April 7, 2011

0


ಬೆಳ್ತಂಗಡಿ: ಪಡಿತರ ಸಾಮಗ್ರಿ ಗಳನ್ನು ನ್ಯಾಯಬೆಲೆ ಅಂಗಡಿದಾರರೇ ಸ್ವತಃ ಎತ್ತುವಳಿ ಮಾಡಬೇಕೆಂಬ ರಾಜ್ಯ ಸರಕಾರದ ಆದೇಶ ತಾಲೂಕಿನಲ್ಲಿ ವ್ಯತಿರಿಕ್ತ ಪರಿಣಾಮವುಂಟಾಗಿದ್ದು ಏಪ್ರಿಲ್ ತಿಂಗಳಿನಿಂದ ತಾಲೂಕಿನ ಪಡಿತರ ಚೀಟಿದಾರರಿಗೆ ಪಡಿತರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದುವರೆಗೆ ಸಾರ್ವಜನಿಕ ವಿತರ ಣಾ ವ್ಯವಸ್ಥೆಯಡಿ ತಾಲೂಕು ಸಗಟು ಗೋದಾಮಿನಿಂದ ನ್ಯಾಯಬೆಲೆ ಅಂಗಡಿ ಗಳಿಗೆ ಪಡಿತರ ಸಾಮಗ್ರಿಗಳನ್ನು ಸರಬ ರಾಜು ಮಾಡುವ ವ್ಯವಸ್ಥೆ ಸರ್ಕಾರ ದಿಂದ ನೇಮಕ ಮಾಡಿರುವ ಸಾಗಾಣಿಕೆ ಗುತ್ತಿಗೆದಾರರ ಮೂಲಕ ನಡೆಯುತ್ತಿತ್ತು. ಆದರೆ ಈಗ ಏ.೧ ರಿಂದ ಸಾಗಾಣಿಕೆ ಗುತ್ತಿಗೆದಾರರ ನೇಮಕ ಮಾಡುವ ವ್ಯವಸ್ಥೆಯನ್ನು ಸರ್ಕಾರ ರದ್ದು ಗೊಳಿ ಸಿದ್ದು, ನ್ಯಾಯಬೆಲೆ ಅಂಗಡಿದಾರರಿಗೇ ಸ್ವತಃ ಸಗಟು ಗೋದಾಮಿನಿಂದ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿ ಸಾಗಾಣಿಕೆ ಮಾಡುವ ಜವಾಬ್ದಾರಿಯನ್ನು ಹೊರಿಸ ಲಾಗಿದೆ. ಆದರೆ ಈ ವ್ಯವಸ್ಥೆಯಿಂದ ನ್ಯಾಯಬೆಲೆ ಅಂಗಡಿದಾರರು ಕೆಲ ಗಂಭೀರ ಸಮಸ್ಯೆಗಳನ್ನು ಎದುರಿಸು ವಂತಾಗಿದೆ.

ತಾಲೂಕಿನ ಕೆಲ ನ್ಯಾಯ ಬೆಲೆ ಅಂಗಡಿಗಳು ತಾಲೂಕು ಕೇಂದ್ರ ದಿಂದ ಸುಮಾರು ೪೦ ಕಿ.ಮೀ.ಗೂ ಹೆಚ್ಚು ದೂರದಲ್ಲಿದ್ದು ಪಡಿತರ ಚೀಟಿಗಳು ತುಂಬಾ ಕಡಿಮೆ ಇದ್ದು ಸಾಗಾಣಿಕೆ ಪ್ರಮಾಣವು ಕಡಿಮೆ ಇರುವುದರಿಂದ ಸರ್ಕಾರವು ಭರಿಸುವ ಸಾಗಾಣಿಕಾ ವೆಚ್ಚಕ್ಕೆ ಯಾವುದೇ ಲಾರಿಗಳು ಲಭ್ಯವಾಗುವುದಿಲ್ಲ. ಸರ ಕಾರದ ಲೆಕ್ಕಾಚಾರದಂತೆ ಪ್ರತಿ ಕ್ವಿಂಟಾಲ್‌ಗೆ ಕೂಲಿ ದರವು ರೂ.೬.೬೦ ಇದೆ. ಆದರೆ ರೂ.೧೫ಕ್ಕಿಂತ ಕಡೆಮೆ ಯಲ್ಲಿ ಕೂಲಿಗಳು ಸಿಗುವುದಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ಪಡಿತರ ಸಾಗಾಣಿಕೆ ಮಾಡುವ ಅವಧಿಯಲ್ಲಿ ಸಾಕಷ್ಟು ಲಾರಿಗಳು ದೊರೆಯುವುದಿಲ್ಲ. ಲಾರಿ ಲಭ್ಯವಿದ್ದರೂ ಸರ್ಕಾರ ನೀಡುವ ಸಾಗಾಣಿಕಾ ವೆಚ್ಚಕ್ಕೆ ಲಾರಿ ಮಾಲೀಕರು ಸಾಗಾಣಿಕೆ ಮಾಡಲು ಒಪ್ಪುವುದಿಲ್ಲ. ಸಕ್ಕರೆ ಸಾಗಾಣಿಕೆಗೆ ಸರ್ಕಾರ ಭರಿಸುವ ಅಲ್ಪ ಸಾಗಾಣಿಕಾ ವೆಚ್ಚದಿಂದ ಈಗಾಗಲೇ ನ್ಯಾಯಬೆಲೆ ಅಂಗಡಿದಾ ರರಿಗೆ ನಷ್ಟವಾಗುತ್ತಿದೆ.ಈಗ ಸಾಗಾಣಿಕೆ ಬಾಡಿಗೆ ರೂ.೮೦೦ ರೂ ಇದೆ. ಅಂಗಡಿ ದಾರರೇ ಸಾಗಿಸುವುದಾದರೆ ಅದು ರೂ.೩೦೦೦ ದಿಂದ ೫೦೦೦ ಬಾಡಿಗೆ ದರ ಆಗಲಿದೆ.

ಅಲ್ಲದೆ ಇತ್ತೀಚೆಗೆ ಸಗಟು ಗೋದಾಮಿನಲ್ಲಿ ಏಕಕಾಲಕ್ಕೆ ಎಲ್ಲಾ ವರ್ಗದ ಪಡಿತರ ಚೀಟಿಗಳಿಗೆ ಸಂಬಂಧ ಪಟ್ಟ ಪಡಿತರ ಸಾಮಗ್ರಿಗಳು ಲಭ್ಯವಾಗದೆ ಬಿ.ಪಿ.ಎಲ್ ಪಡಿತರ ಚೀಟಿಗಳ ಬಾಬ್ತು ಅಕ್ಕಿ ಮತ್ತು ಗೋಧಿಯನ್ನು ಮೊದಲ ಕಂತಿನಲ್ಲಿ ಎಪಿಎಲ್ ಅಕ್ಕಿ-ಗೋಧಿ ಯನ್ನು ಎರಡನೇ ಕಂತಿನಲ್ಲಿ ವಿಳಂಬ ವಾಗಿ ಕಳುಹಿಸುವುದರಿಂದ ಸರಕಾರ ನಿಗದಿ ಪಡಿಸಿದ ಅವಧಿಯೊಳಗೆ ಪಡಿತರ ವಿತರಣೆ ಮಾಡಲು ಅಸಾಧ್ಯ ವಾಗಲಿದೆ. ಏಕಕಾಲಕ್ಕೆ ಎಲ್ಲಾ ನ್ಯಾಯ ಬೆಲೆ ಅಂಗಡಿದಾರರು ಸಗಟು ಮಳಿಗೆ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ತಂದು ಕೂಲಿಗಳನ್ನು ಕರೆದುಕೊಂಡು ಬಂದ ದಿನ ಸಗಟು ಮಳಿಗೆಯಲ್ಲಿ ದಾಸ್ತಾನು ವ್ಯತ್ಯಯ ಸಂಭವಿಸಿದಲ್ಲಿ ಅಪಾರ ಪ್ರಮಾಣದ ನಷ್ಟ ಅನುಭವಿ ಸಬೇಕಾಗುತ್ತದೆ.

ಈ ಎಲ್ಲಾ ಸಮಸ್ಯೆಗಳನ್ನು ಮನ ಗಂಡ ತಾಲೂಕಿನ ಸಹಕಾರಿ ಬ್ಯಾಂಕು ಗಳಲ್ಲಿನ ೪೮ ನ್ಯಾಯ ಬೆಲೆ ಅಂಗಡಿಯ ಹಾಗು ೧೯ ಖಾಸಗಿ ನ್ಯಾಯಬೆಲೆ ಅಂಗಡಿಯ ವಿತರಕರು ಬೆಳ್ತಂಗಡಿ ಯಲ್ಲಿ ಸಭೆ ಸೇರಿ ಒಂದೋ ಹಿಂದಿನ ಪದ್ಧತಿ ಯನ್ನೇ ಮುಂದುವರಿಸಬೇಕು ಇಲ್ಲವಾ ದಲ್ಲಿ ಸೂಕ್ತ ವಾಹನ,ಕೂಲಿ ಬಾಡಿಗೆ ನೀಡಬೇಕು. ಇಲ್ಲವಾದಲ್ಲಿ ಎಪ್ರಿಲ್ ತಿಂಗಳ ರೇಶನ್ ಚಲನ್‌ಗಳನ್ನು ಕಟ್ಟುವು ದಿಲ್ಲ ಮಾತ್ರವಲ್ಲ ಈ ತಿಂಗಳಿ ನಿಂದ ಪಡಿತರವನ್ನು ತೆಗೆದುಕೊಂಡು ಹೋಗ ದಿರುವ ನಿರ್ಧಾರವನ್ನು ಒಮ್ಮತದಿಂದ ತೆಗೆದುಕೊಂಡಿದ್ದಾರಲ್ಲದೆ ಈ ಬಗ್ಗೆ ಮನವಿಯನ್ನು ತಹಸೀ ಲ್ದಾರರಿಗೆ ನೀಡಿದ್ದಾರೆ.

Advertisements