ವೆಟೆಲ್‌ಗೆ ಅಷ್ಟು ಸುಲಭವಲ್ಲ: ಹಿಲ್

Posted on April 7, 2011

0


ನವದೆಹಲಿ: ಈ ವರ್ಷದ ಫಾರ್ಮುಲಾ ಒನ್‌ನಲ್ಲಿ ಸೆಬಾಸ್ಟಿನ್ ವೆಟೆಲ್ ನೇತೃತ್ವದ ರೆಡ್ ಬುಲ್‌ಗೆ ಜಯ ಸಾಧಿಸುವುದು ಅಷ್ಟು ಸುಲಭವಲ್ಲ. ಫೆರಾರಿ ಮೊದಲ ಸ್ಥಾನದಲ್ಲಿ ಕಾಣಿಸುವ ಹೆಚ್ಚಿನ ಸಾಧ್ಯತೆ ಇದೆ ಎಂದು ಮಾಜಿ ಚಾಂಪಿಯನ್ ಡೆಮಾನ್ ಹಿಲ್ ಅಭಿಪ್ರಾಯ ಪಟ್ಟಿದ್ದಾರೆ.

ಫೆರಾರಿಗೆ ಈ ಭಾರಿ ಹೆಚ್ಚಿನ ಅವಕಾಶವಿದೆ. ಆದರೆ ಮೆಕ್‌ಲಾರೆನ್ ಟೆಸ್ಟ್ ಸಮಯದಲ್ಲಿ ತೋರಿದ ಕಳಪೆ ನಿರ್ವಹಣೆಯನ್ನು ತಿದ್ದಿ ಈಗ ಉತ್ತಮ ಸಾಮರ್ಥ್ಯ ತೋರಿದ್ದು ಅದೂ ಕೂಡ ಜಯದ ರೇಸ್‌ನಲ್ಲಿದೆ. ಒಟ್ಟಿನಲ್ಲಿ ಈ ಸಲದ ಟೂರ್ನಿ ನಿಕಟವಾಗಿ ನಡೆಯಲಿದೆ ಎಂದು ಹಿಲ್ ತಿಳಿಸಿದ್ದಾರೆ.

Advertisements
Posted in: Sports News