ವಿಟ್ಲ: ಕಲ್ಲಿನ ಕೋರೆಗೆ ದಾಳಿ

Posted on April 7, 2011

0


ವಿಟ್ಲ: ಸರಕಾರಿ ಜಾಗದಲ್ಲಿದ್ದ ಅಕ್ರಮ ಕಲ್ಲಿನ ಕೋರೆಯೊಂದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಟಿಪ್ಪರ್ ಲಾರಿ ಯನ್ನು ವಶಪಡಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.

ಪುತ್ತೂರು ಸಮೀಪದ ಕೋಡಿ ಪ್ಪಾಡಿ ನಿವಾಸಿಗಳಾದ ಮಹಮ್ಮದ್ ಹಾಗೂ ಕುಳ ಗ್ರಾಮದ ಕಲ್ಲದ್ದಡ್ಕ ನಿವಾಸಿ ಹಮೀದ್ ಎಂಬವರು ಒಂದು ಎಕರೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಳೆದ ಕೆಲವು ತಿಂಗಳಿಂದ ಕಲ್ಲಿನ ಕೋರೆಯನ್ನು ನಡೆಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಪ್ರಬಾರ ಕಂದಾಯ ನಿರೀಕ್ಷಕ ಮಹಮ್ಮದ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಎರಡು ಟಿಪ್ಪರ್ ಮತ್ತು ಕೋರೆ ಯಲ್ಲಿ ಉಪಯೋಗಿಸುತ್ತಿದ್ದ ಪಿಕ್ಕಾಸ್, ಹಾರೆ, ಸಬ್ಬಲ್, ಸುತ್ತಿಗೆ, ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಪಡಿ ಸಿಕೊಂಡಿದ್ದಾರೆ.

ದಾಳಿ ನಡೆಸಿದ ತಂಡ ದಲ್ಲಿ ವಿಟ್ಲ ವಿ.ಎ.ಶಿವಪ್ಪ, ಗ್ರಾಮ ಸಹಾ ಯಕ ರಾಘವ ಗೌಡ, ಗಿರೀಶ್ ಹಾಗೂ ವಿಟ್ಲ ಪೊಲೀಸರು ಪಾಲ್ಗೊಂ ಡಿದ್ದರು. ಈ ಪ್ರಕರಣವನ್ನು ಕಂದಾಯ ಇಲಾಖೆ ಯವರು ವಿಟ್ಲ ಪೊಲೀಸರಿಗೆ ಹಸ್ತಾಂ ತರಿಸಿದ್ದಾರೆ. ಈ ಸಂಧರ್ಭ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪ ಡಿಸಲಾಗಿತ್ತೆಂದು ತಿಳಿದು ಬಂದಿದೆ.

Advertisements