ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ

Posted on April 7, 2011

0


ವಿಟ್ಲ: ಪತಿ ಹಾಗೂ ಆತನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮಾನಸಿಕವಾಗಿ ನೊಂದ ವಿವಾಹಿತ ಮಹಿಳೆ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ನೆಟ್ಲ ಮೂಡ್ನೂರು ಗ್ರಾಮದ ಪರ್ಲಿಟ್ಟು ಎಂಬಲ್ಲಿ ನಡೆದಿದೆ.

ಮಾಣಿ ಸಮೀಪದ ಪರ್ಲಿಟ್ಟು ನಿವಾಸಿ ಪಿ.ಕೆ.ಅಬ್ದುಲ್ ಖಾದರ್ ಅವರ ಪುತ್ರಿ ಹಾಜಿರಾ (೨೫) ಆತ್ಮಹತ್ಯೆಗೆ ಶರಣಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವಳು.

ಬೆಳ್ತಂಗಡಿ ತಾಲೂಕಿನ ಮದ್ದಡ್ಕ ನಿವಾಸಿ ಅಹಮ್ಮದ್ ಕುಂಞ ಎಂಬವರ ಮಗ ಮಹ ಮ್ಮದ್ ಹಮೀದ್ ಎಂಬಾತ ಹಾಜಿರಳನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ತದನಂತರ ಆತ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ. ಹಾಜಿರಾಳ ಅತ್ತೆ ಖತೀಜಮ್ಮ, ಆಕೆಯ ಮಗ ಹುಸೈನರ್ ಹಾಗೂ ಆತನ ಹೆಂಡತಿ ಖೈರುನ್ನೀಸಾ, ಹಾಜಿರಾಳನ್ನು ಕಳೆದ ಕೆಲವು ವರ್ಷಗಳಿಂದ ವರದಕ್ಷ್ಷಿಣೆಗಾಗಿ ಪೀಡಿ ಸುತ್ತಿದ್ದರು ಎನ್ನಲಾಗಿದೆ.

ಪತಿಯೂ ವಿದೇಶದಿಂದಲೇ ಫೋನ್ ನಲ್ಲಿ ಆಕೆಗೆ ಚುಚ್ಚು ಮಾತುಗಳ ಮೂಲಕ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ಇವಳು ಕಳೆದ ಆರು ತಿಂಗಳಿಂದ ತನ್ನ ತವರು ಮನೆಯಲ್ಲೇ ವಾಸವಾಗಿದ್ದಳು. ಮೂರು ದಿನಗಳ ಹಿಂದೆ ಈಕೆ ತನ್ನ ಗಂಡನಲ್ಲಿ ಫೋನ್ ಮೂಲಕ ಮಾತನಾಡಿದಾಗ ಆತ ತಾನು ವಿದೇಶದಲ್ಲಿ ಬೇರೆ ಮದುವೆಯಾಗಿರುವುದಾಗಿ ಹೇಳಿದ್ದಾನೆ ಹಾಗೂ ಪ್ರಶ್ನಿಸಿದ್ದಕ್ಕೆ ನೀನು ಸತ್ತು ಹೋಗು ಎಂದಿದ್ದಾನೆ ಎನ್ನಲಾಗಿದೆ. ಹಾಗಾಗಿ ಇದ ರಿಂದ ಮನನೊಂದ ಯುವತಿ ಎರಡು ದಿನಗಳ ಹಿಂದೆ ತನ್ನ ತವರು ಮನೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಆಕೆಯನ್ನು ಮಂಗ ಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾಳೆ. ಪತಿ ಮಹಮ್ಮದ್ ಹಮೀದ್ ವಿರುದ್ದ ವಿಟ್ಲ ಪೊಲೀಸರು ದೂರು ದಾಖಲಿಸಿದ್ದಾರೆ. ಹಾಜಿರಾಳ ಸಾವಿಗೆ ಅತ್ತೆ ಖತೀಜಮ್ಮ, ಆಕೆಯ ಮಗ ಹುಸೈನಾರ್, ಮತ್ತು ಆತನ ಹೆಂಡತಿ ಖೈರುನ್ನೀಸಾ ಹಾಗೂ ಆಕೆಯ ಪತಿಯೇ ಕಾರಣವೆಂದು ಸ್ಥಳಿಯರು ಆರೋಪಿಸಿದ್ದಾರೆ.

Advertisements
Posted in: Crime News