ರೈಲು ಡಿಕ್ಕಿ: ಬಾಲಕ ಮೃತ್ಯು

Posted on April 7, 2011

0


ಮಂಗಳೂರು: ತಲಪಾಡಿ ಬಳಿಯ ರೈಲ್ವೆ ಹಳಿಯಲ್ಲಿ ಬುಧವಾರ ಸಂಜೆ ರೈಲು ಡಿಕ್ಕಿ ಹೊಡೆದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ತಲಪಾಡಿ ಜುಮಾ ಮಸೀದಿ ಬಳಿಯ ಮುಹಮ್ಮದ್ ಶರೀಫ್ ಎಂಬವರ ಪುತ್ರ ಮುಹಮ್ಮದ್ ಇಮ್ತಿಯಾಜ್ (೧೪) ಮೃತಪಟ್ಟ ಬಾಲಕ. ಈತ ಒಂಬತನೇ ತರಗತಿಯಲ್ಲಿ ಕಲಿಯುತ್ತಿದ್ದು ನಿನ್ನೆ ಸಂಜೆ ಆಟವಾಡಿ ಬರುವುದಾಗಿ ತಂದೆಯಿಂದ ಹೇಳಿ ಮನೆಯಿಂದ ಹೊರಟಿದ್ದ. ಮರಳಿ ಮನೆಗೆ ಬರುವ ಸಂದರ್ಭ ರೈಲು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿರಬೇಕೆಂದು ಶಂಕಿಸಲಾಗಿದೆ.

Advertisements
Posted in: Crime News