ಯುವತಿಯ ಸಾಮೂಹಿಕ ಅತ್ಯಾಚಾರ

Posted on April 7, 2011

0


ಕಾಸರಗೋಡು: ಅನಾಥ ಮಂದಿ ರದ ನಿವಾಸಿಯಾದ ೧೭ರ ಹರೆಯದ ಯುವತಿಯ ಸಾಮೂಹಿಕ ಅತ್ಯಾ ಚಾರಕ್ಕೆ ಪ್ರಕರಣದ ಆರೋ ಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿ ದ್ದಾರೆ.

ಇಲ್ಲಿಯ ಪಯ್ಯನ್ನೂರಿನ ಕಾನಾಯಿ ನಿವಾಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ. ತಾನು ಅತ್ಯಾ ಚಾರಕ್ಕೆ ಒಳಗಾಗಿರುವುದನ್ನು ಸ್ವತಃ ಆಕೆಯೇ ಬಹಿರಂಗಪಡಿಸಿದ್ದು ಈಕೆ ತ್ರಿಕ್ಕರಿಪುರದ ಉಡ್ಪುಂತಲದ ಅನಾಥ ಮಂದಿರದಲ್ಲಿ ವಾಸಿಸುತ್ತಿದ್ದಳು. ಕಳೆದ ದಿನ ಮನೆಗೆ ಬಂದಿದ್ದಾಗ ತೀರಾ ಅಸ್ವಸ್ಥ ಳಂತೆ ಕಾಣಿಸುತ್ತಿದ್ದ ಈಕೆಯಲ್ಲಿ ಮನೆ ಮಂದಿ ವಿಚಾರಿಸಿದ್ದರು.

ಅಳುವುದನ್ನು ಬಿಟ್ಟು ಬೇರೆನೂ ಹೇಳಲು ಮುಂದಾಗದೇ ಇದ್ದಾಗ ಸಂಬಂಧಿಕರು ಕಣ್ಣೂರಿನ ಚೈಲ್ಡ್ ಲೈನ್ ಕಾರ್ಯ ಕರ್ತರಿಗೆ ಮಾಹಿತಿ ನೀಡಿದ್ದು ಅವರು ಯುವತಿ ಯನ್ನು ವಿಚಾರಿಸಿದಾಗ ಅತ್ಯಾಚಾರ ವಿಷಯ ಬಯಲಿಗೆ ಬಂತು.

Advertisements
Posted in: Crime News