ಯುಪಿಸಿಎಲ್: ಬಿಜೆಪಿ ಯುವಕರು ರೈತ ಸಂಘದತ್ತ?

Posted on April 7, 2011

0


ಮಂಗಳೂರು: ಪರಿಸರ ಮಾಲಿನ್ಯ ಮತ್ತು ಸ್ಥಾವರ ಅನುಷ್ಠಾನ ವಿಚಾರದಲ್ಲಿ ವಿವಾದಾಸ್ಪದವೆನಿಸಿರುವ, ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಕಾರ್ಯಾ ರಂಭ ಮಾಡಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಖಚಿತ ನಿಲುವು ವ್ಯಕ್ತಪಡಿಸದಿರುವ ಬಿಜೆಪಿಯ ಉಡುಪಿ ಜಿಲ್ಲಾ ಸಮಿತಿಯ ವಿರುದ್ಧ ಸ್ಥಾವರದ ಆಸುಪಾಸಿನ ಗ್ರಾಮಗಳ ಬಿಜೆಪಿ ಕಾರ‍್ಯಕರ್ತರು ತೀರಾ ಅಸಹನೆ ಯಿಂದಿದ್ದು, ಪಕ್ಷ ತೊರೆದು ರೈತ ಸಂಘ ಸೇರುವ ನಿರ್ಧಾರ ತಳೆದಿರುವ ವಿಚಾರ ಬೆಳಕಿಗೆ ಬಂದಿದೆ.

ಪಡುಬಿದ್ರಿ ಯುವಮೋರ್ಚಾದ ವತಿಯಿಂದ ನಿನ್ನೆ ಪಡುಬಿದ್ರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ, ಹಿಂದೆ ತುಂಬಿ ತುಳುಕುತ್ತಿದ್ದ ಕಾರ‍್ಯಕರ್ತರು ಕೇವಲ ಬೆರಳೆಣಿಕೆಯಲ್ಲಿದ್ದುದು ಈ ಬೆಳವಣಿಗೆಯನ್ನು ತೋರಿಸುವಂತಿದೆ ಎಂದು ಪಕ್ಷದ ನಿಷ್ಠಾವಂತ ಪದಾಧಿಕಾರಿ ಯೋರ್ವರು ಪತ್ರಿಕೆಗೆ ತಿಳಿಸಿದ್ದಾರೆ.

ಪಕ್ಷದ ಸ್ಥಾನೀಯ ಸಮಿತಿ ಸಭೆಗಳು ಈ ಹಿಂದೆ ತಿಂಗಳಿಗೊಮ್ಮೆ ನಡೆಯುತ್ತಿದ್ದು ಇದೀಗ ಎರಡು ತಿಂಗಳಾದರೂ ಸಭೆ ನಡೆಯುತ್ತಿಲ್ಲ. ಮೊಗವೀರ, ಬಂಟ ಕಾರ‍್ಯಕರ್ತರು ಮತ್ತು ಕೆಲಮಂದಿ ಪಂಚಾ ಯತ್ ಸದಸ್ಯರೂ ಸಭೆಗಳಿಗೆ ಹಾಜರಾಗು ತ್ತಿಲ್ಲ ಎಂದ ಅವರು, ಇವರೆಲ್ಲ ಯುಪಿಸಿ ಎಲ್ ವಿಚಾರದಲ್ಲಿ ಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪಕ್ಷದ ನಾಯಕ ಡಾ| ವಿ.ಯಸ್ ಆಚಾರ್ಯ ಮತ್ತವರ ಉಡುಪಿಯ ಆಪ್ತರ ಬಳಗ ಬಹಿರಂಗವಾಗಿ ಯುಪಿಸಿ ಎಲ್‌ನೊಂದಿಗೆ ಗುರುತಿಸಿಕೊಂಡಿ ರುವುದು ಮತ್ತು ಸ್ಥಳೀಯ ಜನರ ಭಾವನೆಗಳಿಗೆ ವ್ಯತಿರಿಕ್ತವಾಗಿ ನಡೆದು ಕೊಳ್ಳುತ್ತಿರುವುದು ಯುವಜನರು ಭ್ರಮ ನಿರಸನ ಹೊಂದಲು ಮುಖ್ಯ ಕಾರಣ ವೆನ್ನಲಾಗಿದೆ.

ಒಂದೆರಡು ದಿನಗಳಲ್ಲಿ ಪಕ್ಷದ ಪಡುಬಿದ್ರಿ ಘಟಕದ ಯುವಕರ ತಂಡ ವೊಂದು ಸಾಮೂಹಿಕ ರಾಜೀ ನಾಮೆ ನೀಡಿ ಪಕ್ಷದಿಂದ ಹೊರ ಬರುವು ದೆನ್ನಲಾಗಿದ್ದು ಒಂದೋ ಪಕ್ಷಾ ತೀತ ತಂಡ ರಚಿಸಿಕೊಂಡು ಇಲ್ಲವೇ ರೈತ ಸಂಘದೊಂದಿಗೆ ಗುರುತಿಸಿ ಕೊಂಡು ಯುಪಿಸಿಎಲ್ ವಿರುದ್ಧ ರಚನಾತ್ಮಕ ಹೋರಾಟ ನಡೆಸಲು ಕಾರ್ಯತಂತ್ರ ಹೆಣೆದಿರುವುದು ಬಹಿರಂಗಗೊಂಡಿದೆ. ಇವರೊಂದಿಗೆ ಸಮುದಾಯದ ಮುಖಂಡರು, ಪಂಚಾಯತ್ ಸದಸ್ಯರು ಮತ್ತು ಪಕ್ಷದ ವಿವಿಧ ಪದಾಧಿ ಕಾರಿಗಳು ಸೇರಿಕೊಳ್ಳಲಿ ದ್ದಾರೆನ್ನ ಲಾಗಿದೆ.

ನಿನ್ನೆ ನಡೆದ ಸಭೆಯಲ್ಲೇ ಈ ಘಟ ಸ್ಫೋಟ ಸಂಭವಿಸುವಂತಿದ್ದು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿಲಾಸ್ ನಾಯಕ್, ಪಡುಬಿದ್ರಿ ಜಿ.ಪಂ ಸದಸ್ಯ ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಮುಂತಾದವರು ಮುಂದಿನ ಮೂರು ತಿಂಗಳವರೆಗೆ ಕಂಪೆನಿಯ ಕಾರ್ಯ ವೈಖರಿಯನ್ನು ಕಾದು ನೋಡುವ ಎಂದು ಮನವಿ ಮಾಡಿದ್ದರಿಂದಾಗಿ ಸಭೆ ಸಾಂಗ ವಾಗಿ ನಡೆಯಿತೆನ್ನಲಾಗಿದೆ.

Advertisements