ಮಕ್ಕಳಿಗಾಗಿ ಪಾಲಕರ ಪ್ರತಿಭಟನೆ

Posted on April 7, 2011

0


ಮಂಗಳೂರು: ಹಳೆಯಂಗಡಿಯ ಅನಧಿಕೃತ ಪ್ರಾರ್ಥನಾ ಮಂದಿರದಲ್ಲಿ ಬಂಧಿಗ ಳಾಗಿದ್ದ ಮಕ್ಕಳೀಗ ಬೋಂದೆಲ್‌ನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಭದ್ರವಾ ಗಿದ್ದರೂ ನಿನ್ನೆ ಮಕ್ಕಳ ಪಾಲಕರು ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ದಾರೆ.

ಹಳೆಯಂಗಡಿಯ ರೈಲ್ವೇ ಗೇಟ್ ಬಳಿ ಯಿರುವ ಮನೆಯೊಂದರಲ್ಲಿ ಕಳೆದ ಹಲ ವಾರು ವರ್ಷಗಳಿಂದ ಕೆ.ಜೆ.ಜಾಯ್, ಆತನ ಹೆಂಡತಿ ಮತ್ತು ಮಕ್ಕಳು ಅನಧಿಕೃತವಾಗಿ ನಡೆಸುತ್ತಿದ್ದ ಎಬಿನೆಜರ್ ಪ್ರಾರ್ಥನಾ ಕೇಂದ್ರ ದಿಂದ ಕೊಳಚೆ ನೀರು ಹರಿದು ಬರುತ್ತಿತ್ತು. ಇದರಿಂದ ಬೇಸತ್ತ ಸ್ಥಳೀಯರು ಗ್ರಾಮ ಪಂಚಾಯತ್‌ಗೆ ನೀಡಿದ ದೂರಿನಂತೆ ಅಧ್ಯಕ್ಷರು ಅಲ್ಲಿಗೆ ತೆರಳಿ ವಿಚಾರಿಸಿದ್ದು ಈ ಸಂದರ್ಭದಲ್ಲಿ ಯಾವುದೇ ದಾಖಲೆಗಳೂ ಮನೆಯವರ ಬಳಿ ಇರಲಿಲ್ಲ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡಿದ್ದ ಅಧ್ಯಕ್ಷರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು ಅದರಂತೆ ಕಳೆದ ಶನಿವಾರದಂದು ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳು ೨೬ ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಮಂಗಳೂರಿನ ಬೋಂದೆಲ್‌ನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಿದ್ದರು. ಕಳೆದ ಆರು ದಿನಗಳಿಂದ ಮಕ್ಕಳು ಇಲ್ಲಿ ಸುರಕ್ಷಿತವಾಗಿದ್ದಾರೆ.

ಆದರೆ ನಿನ್ನೆ ಪಾಲಕರು ಬೋಂದೆಲ್‌ಗೆ ಆಗಮಿಸಿ ಮಕ್ಕಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೇಳಿದ್ದು ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಹಸ್ತಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಪಾಲಕರು ಕೇಂದ್ರದ ಪಕ್ಕದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಾರ್ಥನಾ ಮಂದಿರದಲ್ಲಿ ಉಚಿತವಾಗಿ ಅನ್ನಾಹಾರ ನೀಡಿ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಬಡವರಾದ ನಾವು ಎಬಿನೇಜರ್ ಕೇಂದ್ರಕ್ಕೆ ಸೇರಿಸಿದ್ದು ಇದನ್ನು ಕಂಡು ಸಹಿಸದ ಸ್ಥಳೀಯರು ಕೆ.ಜೆ.ಜಾಯ್ ವಿರುದ್ಧ ಸುಳ್ಳು ದೂರು ನೀಡಿ ಸಂಸ್ಥೆಯನ್ನು ಮುಚ್ಚಿಸಿದ್ದಾರೆ. ಕಳೆದ ಮೂರು ದಿನಗಳಿಂದ ಜಾಯ್ ಅವರನ್ನು ಠಾಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಪಾಲಕರ ಪೈಕಿ ಬೆಂಗಳೂರಿನ ಕುಸುಮಾ ದೂರಿದ್ದಾರೆ.

ಆರೋಪಿಯ ರಕ್ಷಣೆಗೆ ತಂತ್ರ ?

ಹಳೆಯಂಗಡಿಯ ಎಬಿನೇಜರ್ ಪ್ರಾರ್ಥನಾ ಮಂದಿರದ ದಾಳಿ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಪೊಲೀಸರು ತಲ್ಲೀನರಾಗಿರುವುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದರೂ ಆರೋಪಿ ಪರವಾಗಿ ವರದಿ ತಯಾರಿಸುವ ಹುನ್ನಾರ ನಡೆದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಹಿಂದೂ ಸಂಘಟನೆಯ ಕೆಲವು ನಾಯಕರು ಮೂಲ್ಕಿ ವೃತ್ತ ನಿರೀಕ್ಷಕರನ್ನು ಭೇಟಿಯಾಗಿ ಬಾಲಕಿಯ ಮರು ವೈದ್ಯಕೀಯ ಪರೀಕ್ಷೆ ನಡೆಸಲು ಒತ್ತಾಯಿಸಿದ್ದು ಅದಕ್ಕೆ ಸಮ್ಮತಿಯೂ ದೊರಕಿದೆ ಎನ್ನಲಾಗಿದೆ. ಅದಲ್ಲದೆ ಇದೀಗ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿರುವ ಪ್ರಾರ್ಥನಾ ಮಂದಿರವನ್ನು ಶಾಶ್ವತವಾಗಿ ಮುಚ್ಚಬೇಕು ಎಂಬ ಒತ್ತಾಯವನ್ನೂ ಹಿಂದೂ ಸಂಘಟನೆಗಳು ಮಾಡಿವೆ.

Advertisements