ಬೊಳುವಾರಿನ ಯುವತಿ ಅತ್ತೆ ಮಗನ ಜತೆ ಪರಾರಿ

Posted on April 7, 2011

0


ಪುತ್ತೂರು: ಪುತ್ತೂರಿನ ಬೊಳು ವಾರು ಸಮೀಪದ ಯುವತಿ ಯೊಬ್ಬಳು ಸೋಮವಾರ ಸಂಜೆಯಿಂದ ನಾಪತ್ತೆ ಯಾಗಿದ್ದು, ಆಕೆ ಮತ್ತು ಆಕೆಯ ಪ್ರಿಯಕರನಾದ ಅತ್ತೆಯ ಮಗ ಜೊತೆ ಯಾಗಿ ಪರಾರಿಯಾಗಿ ಮೈಸೂರಿ ನಲ್ಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪುತ್ತೂರಿನ ಬೊಳುವಾರು ಸಮೀಪದ ಮಿಷನ್‌ಗುಡ್ಡೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರಿ ರೆಹನಾ (೨೦) ನಾಪತ್ತೆಯಾದ ಯುವತಿ. ಕಳೆದ ಸೋಮವಾರ ಸಂಜೆ ಮನೆಯಿಂದ ಹೊರ ಹೋಗಿದ್ದ ಆಕೆ ನಾಪತ್ತೆಯಾಗಿ ರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರಿಗೆ ರೆಹನಾ ಅವರು ಅವರ ಪ್ರಿಯಕರನಾದ ಬೊಳು ವಾರಿನ ಬಶೀರ್ ಇದೀಗ ಮೈಸೂರಿ ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾ ಗಿದೆ. ಅವರೇ ಪೊಲೀಸರಿಗೆ ದೂರ ವಾಣಿಯ ಮೂಲಕ ಮಾಹಿತಿ ನೀಡಿ ತಾವು ಸತಿ ಪತಿಗಳಾಗಿ ಕೆಲವೇ ದಿನದಲ್ಲಿ ಊರಿಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Advertisements
Posted in: Crime News