ಬಾಬಾನ ವಿರುದ್ಧ ಲೈಂಗಿಕ ಆರೋಪ

Posted on April 7, 2011

0


ಬಂಟ್ವಾಳ: ತಾಲೂಕಿನ ಕಾಡಬೆಟ್ಟು ಗ್ರಾಮದ ಬಾಂಬಿಲ ಎಂಬಲ್ಲಿನ ಬೀಬಿ ಅಮ್ಮಾಜಾನ್, ಬಾವಾಜಾನ್, ಖಾಕೀ ಷಾ ಮೌಲಾ ಬಾಬಾ ಆಸ್ಥಾನದ ಅಬೂಬಕ್ಕರ್ ಅಲಿಯಾಸ್ ಅಬೂಬಕ್ಕರ್ ಮಸ್ತಾನ್ ಎಂಬವರ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಕಾವಳಪಡೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಪತ್ನಿ ದೂರು ನೀಡಿದ್ದು, ನನ್ನ ಹತ್ತಿರದ ಸಂಬಂಧಿಯಾದ ಅಬೂ ಬಕ್ಕರ್ ಮಸ್ತಾನ್ ಎಂಬವರು ನನ್ನನ್ನು ಅನೈತಿಕ ಚಟುವಟಿಕೆಗೆ ಪ್ರಚೋದಿಸಿದ್ದಲ್ಲದೇ, ಕಿರುಕುಳ ನೀಡಿದ್ದಾರೆ. ಇದನ್ನು ವಿರೋಧಿಸಲು ಹೋದಾಗ ವಿಷಯ ಯಾರಿಗೂ ತಿಳಿಸಬೇಡ. ತಿಳಿಸಿದರೆ ನಿನ್ನ ಬಿಡುವುದಿಲ್ಲ ಎಂದು ಬೆದರಿಸಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿದ ಪೊಲೀಸರು ಅಬೂಬಕ್ಕರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಾಬಾ ಪರಾರಿ: ಈ ನಡುವೆ ಟೀವಿ ವಾಹಿನಿಯೊಂದರಲ್ಲಿ ನಕಲಿ ಬಾಬಾನ ಕಾಮಕಾಂಡದ ವರದಿ ಪ್ರಸಾರಗೊಳ್ಳುತ್ತಿ ದ್ದಂತೆಯೇ ಆಸ್ಥಾನಕ್ಕೆ ದಾಳಿ ನಡೆಸಿದ ಸ್ಥಳೀಯ ಯುವಕರು ಬಾಬಾ ನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಜನ ತನ್ನ ಮನೆಗೆ ಮುತ್ತಿಗೆ ಹಾಕುತ್ತಿದ್ದಂತೆಯೇ ಅಬೂಬಕ್ಕರ್ ಕುಟುಂಬ ಸಮೇತ ಊರು ಬಿಟ್ಟಿದ್ದಾರೆ. ಅವರ ಸಮೀಪ ವರ್ತಿಗಳ ಮಾಹಿತಿಯಂತೆ ಬಾಬ ಕೇರಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಬಾ ಮನೆಯಲ್ಲಿಲ್ಲ ಎಂದು ಮನಗಂಡ ಆಕ್ರೋಶಿತ ಗುಂಪು ಆಯುಧಗಳಿಂದ ಮನೆಯ ಸಾಮಗ್ರಿ ಗಳನ್ನು ಧ್ವಂಸಗೊಳಿಸಿದೆ. ಮನೆ ಲೂಟಿ: ಅಕ್ರಮವಾಗಿ ಮನೆ ಪ್ರವೇಶಿಸಿದ ಯುವಕರ ತಂಡ ಮನೆಯ ಕವಾಟಿನಲ್ಲಿದ್ದ ೫೦ ಪವನ್ ಚಿನ್ನ, ೧.೩೦ ಲಕ್ಷ ರೂ.ನಗದನ್ನು ಲೂಟಿ ಮಾಡಿದೆ. ಅಲ್ಲದೇ ಬೈಕ್, ಕಾರು, ಮನೆಯ ಬಾಗಿಲು, ಪೀಠೋಪಕರಣ, ಫೋಟೋಗಳನ್ನು ಪುಡಿಗೈಯ್ಯಲಾಗಿದೆ.

ಕೊಲೆಗೆ ಯತ್ನ: ಗುಂಪು ಬಾಬಾನನ್ನು ಕೊಲೆಗೈಯ್ಯಲು ಸಂಚು ರೂಪಿಸಿದೆ. ಇದೇ ಉದ್ದೇಶಕ್ಕಾಗಿ ಮಾರಕಾಯುಧಗಳೊಂದಿಗೆ ದಾಳಿ ನಡೆಸಿದ ಯುವಕರು ಪೂರ್ವಯೋಚಿತವಾಗಿ ಸಜ್ಜುಗೊಂಡಿದ್ದರು ಎಂದು ಅಬೂಬಕ್ಕರ್ ಸಂಬಂಧಿ ಗಳು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸುಮಾರು ೫೦ ವಿರುದ್ಧ ದೂರು ದಾಖಲಾಗಿದೆ. ಕಾವಳಕಟ್ಟೆ ನಿವಾಸಿ ಅಬ್ದುಲ್ ಖಾದರ್, ಅಲ್ತಾಫ್, ಅನ್ವರ್ ಸಹಿತ ಸ್ಥಳೀಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ.

ವಿವಾದಕ್ಕೆ ಕಾರಣ: ಸುಮಾರು ೨೫ ವರ್ಷಗಳಿಂದ ಬಾಂಬಿಲದಲ್ಲಿ ನೆಲೆಸಿರುವ ಅಬೂಬಕ್ಕರ್ ಮಸ್ತಾನ್ ಭೂತ ಬಿಡಿಸುವ, ಕಾಯಿಲೆಗೆ ಬಿದ್ದವರನ್ನು ಗುಣಪಡಿಸುವ ಕೆಲಸ ಮಾಡುತ್ತಿದ್ದರು. ಹೊರ ಊರಿನಿಂದ ಜನರೂ ಬಂದು ಸೇರುತ್ತಿದ್ದರು. ಹಿಂದೂ, ಕ್ರೈಸ್ತರಲ್ಲಿ ಮಸ್ತಾನ್‌ಗೆ ಅಭಿಮಾನಿಗಳಿದ್ದರು. ಮಸ್ತಾನ್ ಮೇಲೆ ಜಮಾಅತಿನ ಕೆಲವರು ಲೈಂಗಿಕ ಆರೋಪಗಳನ್ನು ವ್ಯಕ್ತಪಡಿಸಿದ್ದರು. ಆದರೂ ಆಸ್ಥಾನದ ಕಾರ್ಯ ಚಟುವಟಿಕೆಗಳಿಗೆ ಸ್ಥಳೀಯರು ಆಕ್ಷೇಪ ಎತ್ತಿರಲಿಲ್ಲ. ಇತ್ತೀಚೆಗೆ ಮಸೀದಿಗೆ ಖತೀಬರಾಗಿ ಬಂದಿದ್ದ ಹಮೀದ್ ದಾರಿಮಿ ಎಂಬವರು ಮಸ್ತಾನ್ ಕೆಲಸ ಕಾರ್ಯಗಳನ್ನು ಬೆಂಬಲಿಸಿದ್ದು, ಕೆಲವು ಜಮಾಅತಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಖತೀಬರ ಮೇಲೆ ಸಿಡಿದೆದ್ದ ಕೆಲವರು ಜಮಾಅತ್ ತ್ಯಜಿಸಿದ್ದರು. ಆದರೂ ಜಮಾಅತಿಗರ ಆಕ್ಷೇಪಕ್ಕೆ ಮಸೀದಿ ಕಮಿಟಿಯವರು ಮನ್ನಣೆ ಕೊಟ್ಟಿ ರಲಿಲ್ಲ. ಈ ವಿವಾದ ಹಿಂಸಾಚಾರಕ್ಕೆ ತಿರುಗುವ ಮಟ್ಟಕ್ಕೂ ಬೆಳೆಯಬಹುದೆಂದು ಮಸೀದಿ ಕಮಿಟಿಯವರು ಊಹಿಸಿರಲಿಲ್ಲ.

Advertisements
Posted in: Crime News