ಫೈನಲ್ ಸೋಲು : ಸ್ಥಾನದಿಂದ ಕೆಳಗಿಳಿದ ಮಹೇಲಾ

Posted on April 7, 2011

0


ಕೊಲಂಬೊ: ವಿಶ್ವಕಪ್ ಫೈನಲ್ ನಲ್ಲಿ ಸೋತ ಹಿನ್ನೆಲೆಯಲ್ಲಿ ಶ್ರೀಲಂ ಕಾದ ಮಧ್ಯಮ ಕ್ರಮಾಂಕದ ಆಟಗಾರ ಮಹೇಲಾ ಜಯವರ್ಧನೆ ತಂಡದ ಉಪನಾಯಕನ ಸ್ಥಾನವನ್ನು ತ್ಯಜಿಸಿದ್ದು ಇವರೊಂದಿಗೆ ಅರವಿಂದ ಡಿಸಿಲ್ವ ನೇತೃತ್ವದ ನಾಲ್ಕು ಮಂದಿ ಆಯ್ಕೆಗಾ ರರ ಸಮಿತಿ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ. ಮಂಗಳವಾರ ವಷ್ಟೇ ಕುಮಾರ ಸಂಗಕ್ಕರ ನಾಯಕನ ಪಟ್ಟದಿಂದ ಕೆಳಗಿಳಿದಿದ್ದರು.

ಇದು ನನ್ನ ಪಟ್ಟವನ್ನು ತ್ಯಜಿಸಲು ಸೂಕ್ತ ಸಮಯವಾಗಿದ್ದು ಯುವ ಆಟ ಗಾರರಿಗೆ ಅವಕಾಶ ಕಲ್ಪಿಸುವ ದೃಷ್ಟಿ ಯಿಂದ ಇದು ಉತ್ತಮ ನಿರ್ಧಾರ ವಾಗಿದೆ ಎಂದು ಜಯವರ್ಧನೆ ತಿಳಿಸಿದ್ದಾರೆ. ಇದೇ ತಿಂಗಳ ೩೦ರಂದು ಆಯ್ಕೆ ಸಮಿತಿಯ ಅವಧಿ ಮುಗಿಯ ಲಿದ್ದು ಈ ಹಿನ್ನೆಲೆಯಲ್ಲಿ ಅರವಿಂದ, ರಂಜಿತ್ ಫೆರ್ನಾಂಡೊ, ಅಮಲ್ ಸಿಲ್ವಾ ಹಾಗೂ ಅನ್ವರ್ ಅಲಿ ಅವರ ನ್ನೊಳಗೊಂಡ ಸಮಿತಿ ತನ್ನ ರಾಜೀ ನಾಮೆಯನ್ನು ಲಂಕಾ ಕ್ರೀಡಾ ಮಂತ್ರಿಗೆ ಸಲ್ಲಿಸಿದೆ. ಜಯವರ್ಧನೆ ರಾಜೀನಾಮೆ ಯನ್ನು ನಾವು ಸ್ವೀಕರಿಸಿದ್ದು ಇನ್ನೆರಡು ದಿನಗಳಲ್ಲಿ ಈ ಕುರಿತು ಚರ್ಚೆ ನಡೆಸಿ ಕಪ್ತಾನ ಹಾಗೂ ಉಪಕಪ್ತಾನನ ಆಯ್ಕೆ ನಡೆಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್‌ನ ಅಧ್ಯಕ್ಷರಾಗಿರುವ ಡಿ.ಎಸ್ ಡಿ‘ ಸಿಲ್ವಾ ಹೇಳಿದ್ದಾರೆ.

Advertisements
Posted in: Sports News