ಪ್ರತಿಪಕ್ಷಗಳನ್ನು ಮಣಿಸಲು ಯಡ್ಡಿ ತಂತ್ರ: ಉಪಚು ನಾವಣೆಯಲ್ಲಿ ಭಾರೀ ಹಣ ವೆಚ್ಚ

Posted on April 7, 2011

0


ಬೆಂಗಳೂರು: ಉಪಚುನಾವಣೆ ಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿ ಪಕ್ಷಗಳನ್ನು ಮಣಿಸಲು ಮೂರು ಕ್ಷೇತ್ರಗಳಿಗೆ ೧೦೦ಕೋಟಿ.ರೂ.ಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದ್ದಾರೆ.

ಪಕ್ಷಕ್ಕೆ ಹಿನ್ನಡೆ ಇದೆ ಎಂಬ ಗುಪ್ತಚರ ವರದಿಯ ಮಾಹಿತಿ ಆಧರಿಸಿ ಮೂರು ಕ್ಷೇತ್ರಗಳನ್ನು ಕಸಿದುಕೊಳ್ಳಲು ಭಾರೀ ಪ್ರಮಾಣದಲ್ಲಿ ಆಮಿಷಗಳನ್ನು ಮತದಾರರಿಗೆ ಒಡ್ಡಲು ಮುಂದಾಗಿದ್ದಾರೆ. ತಮ್ಮ ಆಪ್ತ ಸಚಿವರು ಹಾಗೂ ಶಾಸಕರ ಮೂಲಕ ಮತದಾರರನ್ನು ಸೆಳೆಯಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇಂದು ಸಂಜೆ ಪ್ರಚಾರ ಅಂತ್ಯಗೊಳ್ಳಲಿದ್ದು, ಕ್ಷೇತ್ರದಲ್ಲಿ ಉಳಿದಿರುವ ಪ್ರತಿಪಕ್ಷಗಳ ರಾಜಕೀಯ ಮುಖಂಡರು ಹೊರಹೋದ ನಂತರ ತಮ್ಮ ಚಾಣಾಕ್ಷ್ಯತನ ತೋರಲು ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ಈ ಕ್ಷೇತ್ರಗಳಿಗೆ ಭಾರೀ ಪ್ರಮಾಣದಲ್ಲಿ ಹಣ ಮತ್ತು ಇತರ ಸಾಮಾಗ್ರಿಗಳನ್ನು ಕಳುಹಿಸಲಾಗಿದೆ.

ಇವುಗಳನ್ನು ಹಂಚಿ ತಮ್ಮ ಪಕ್ಷದತ್ತ ಒಲೈಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಮೇಲೆ ಬಂದಿರುವ ಭಾರೀ ಭೃಷ್ಟಾಚಾರದ ಆರೋಪಗಳಲ್ಲಿ ಹುರುಳಿಲ್ಲ.

ಇದಕ್ಕೆ ಜನತೆ ಮನ್ನಣೆ ನೀಡಿಲ್ಲ ಎಂಬುದನ್ನು ಮರು ಚುನಾವಣೆಯ ಮೂಲಕ ತೋರಿಸಲು ಯಡಿಯೂರಪ್ಪ ಹೊರಟಿದ್ದಾರೆ. ಈ ಹಿನ್ನಲೆಯಲ್ಲಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ಜಯಬೇರಿಗೆ ಪ್ರಯತ್ನ ಪಟ್ಟಿದ್ದಾರೆ. ಇದನ್ನರಿತ ಪ್ರತಿಪಕ್ಷಗಳು ಚುನಾವಣಾ ಅಕ್ರಮ ತಡೆಯಲು ತಮ್ಮದೇ ದಾರಿ ಹುಡುಕಿಕೊಂಡಿದ್ದಾರೆ. ಆದರೆ ಸರಕಾರಿ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಹಂಚಿಕೆ ಕಾರ್ಯಕ್ಕೆ ಬಿಜೆಪಿ ಹೊರಟಿದೆ.

ಕಳೆದ ಉಪಚುನಾವಣೆಯಲ್ಲಿ ಮಾಡಿರುವ ವೆಚ್ಚಕ್ಕಾಗಿ ಈ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಖರ್ಚುಮಾಡಿದೆ. ಈ ಚುನಾವಣೆಯಲ್ಲಿ ಆಡಳಿತ ಯಂತ್ರ ಬಳಕೆ ಮಾಡಿ ಕೊಂಡಿರುವುದಲ್ಲದೆ ಮತದಾನಕ್ಕೂ ಮುನ್ನವೇ ಕ್ಷೇತ್ರದಲ್ಲಿರುವ ಮುಖಂಡರುಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿಯೇ ಪಕ್ಷದ ಕೆಲವು ನಾಯಕರನ್ನು ನಿಯೋಜಿಸಿದ್ದು, ಅವರನ್ನು ಕ್ಷೇತ್ರದಿಂದ ತಾತ್ಕಾಲಿಕವಾಗಿ ಹೊರಗಿಡುವ ಪ್ರಯತ್ನ ನಡೆದಿದೆ.

Advertisements
Posted in: State News